
ಮಡಿಕೇರಿ NEWS DESK ಮೇ 25 : ಮಡಿಕೇರಿ ನಗರದ ದೇಚೂರು ಶ್ರೀರಾಮ-ವಿದ್ಯಾ ಗಣಪತಿ ದೇವಸ್ಥಾನದ 28ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಮೇ 27 ರಂದು ಹೆಚ್.ಆರ್.ಉದಯಕುಮಾರ್ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಮಂಗಳವಾರ ಬೆಳಗ್ಗೆಯಿಂದಲೇ ನಿರ್ಮಾಲ್ಯ, ಪುಣ್ಯಾಹ ವಾಚನ, ದೇವತಾ ಪ್ರಾರ್ಥನೆ, ಮಹಾಗಣಪತಿ ಮೂರ್ತಿಗೆ ಅಭಿಷೇಕ, ಬಯಲು ಆಂಜನೇಯ ಪೂಜೆ, ಅಷ್ಠದ್ರವ್ಯ ಮಹಾಗಣಪತಿ, ನವಗ್ರಹ ಹೋಮ, ನಾಗಪೂಜೆ, ಮಧ್ಯಾಹ್ನ ಮಹಾಪೂಜೆ ಶ್ರದ್ಧಾಭಕ್ತಿಯಿಂದ ಜರುಗಲಿದೆ. ಮಂಗಳಾರತಿಯ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆಯಾಗಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.








