ಮಡಿಕೇರಿ ಮೇ 30 NEWS DESK : ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕಣಿವೆ ಬಳಿ ಕಾವೇರಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ. ಸುಮಾರು 25ರಿಂದ 30 ವರ್ಷದ ಟಿಬೆಟಿಯನ್ ಪುರುಷ ವ್ಯಕ್ತಿ ಎಂದು ಸಂಶಯ ವ್ಯಕ್ತವಾಗಿದ್ದು, ಕೈಯಲ್ಲಿ ಬುದ್ಧನ ಚಿತ್ರ ಹಚ್ಚೆ ಹಾಕಿಸಿಕೊಂಡಿರುವುದು ಕಂಡು ಬಂದಿದೆ. ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾರಸುದಾರರು ಪತ್ತೆ ಆದಲ್ಲಿ ತಕ್ಷಣ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.











