
ಮಡಿಕೇರಿ ಜೂ.18 NEWS DESK : ಕೊಡಗು ಪತ್ರಕತ೯ರ ಸಂಘ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಕೊಡಗಿನ ಯುವ ಯೋಗಪಟು ಮದೆನಾಡಿನ ಸಿಂಚನಾಳ ಯೋಗ ಪ್ರದಶ೯ನವನ್ನು ಗಿನ್ನೀಸ್ ವಿಶ್ವದಾಖಲೆಗೆ ಸೇಪ೯ಡೆ ಮಾಡುವ ಕಾಯ೯ಕ್ರಮ ಜೂ.21 ರಂದು ವಿಶ್ವಯೋಗ ದಿನಾಚರಣೆಯಂದು ಮಡಿಕೇರಿಯಲ್ಲಿ ಆಯೋಜಿತವಾಗಿದೆ. ನಗರದ ಪತ್ರಿಕಾಭವನ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಮದೆನಾಡಿನ ಬಿಜಿಎಸ್ ಪಬ್ಲಿಕ್ ಶಾಲೆಯ 6ನೇ ತರಗತಿ ವಿದ್ಯಾಥಿ೯ನಿ ಸಿಂಚನಾಳ ಯೋಗಪ್ರದಶ೯ನವನ್ನು ಗಿನ್ನೀಸ್ ದಾಖಲೆಗೆ ಸೇಪ೯ಡೆಗೊಳಿಸುವ ನಿಟ್ಟಿನಲ್ಲಿ ಡಿಂಬಾಸನ ಯೋಗ ಆಯೋಜಿಸಲಾಗಿದೆ. 30 ನಿಮಿಷ 5 ಸೆಕೆಂಡ್ ಗಳ ಕಾಲ ಸಿಂಚನಾ ಡಿಂಬಾಸನ ಯೋಗ ಭಂಗಿಯಲ್ಲಿರುವ ಮೂಲಕ ಗಿನ್ನೀಸ್ ವಿಶ್ವದಾಖಲೆ ಮಾಡಲಿದ್ದು, ಪರಿಣಿತರು ಈ ಸಂಬಂಧಿತ ದಾಖಲೆ ಮಾಡಿಕೊಳ್ಳಲಿದ್ದಾರೆ. ಈ ಮೂಲಕ ಸಿಂಚನಾಳ ಯೋಗ ಪ್ರತಿಭೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









