
ನಾಪೋಕ್ಲು ಜೂ.19 NEWS DESK : ಕಾಡಾನೆಯೊಂದು ಮನೆಯ ಅಂಗಳದಲ್ಲಿ ದಾಂಧಲೆ ನಡೆಸಿ, ಹೂ ಕುಂಡಗಳನ್ನು ಹಾನಿಗೊಳಿಸಿದ ಘಟನೆ ಕಕ್ಕಬ್ಬೆ ಗ್ರಾ.ಪಂ ವ್ಯಾಪ್ತಿಯ ಮರಂದೋಡ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಮುಕ್ತರ್ ಅಹಮದ್ ಎಂಬವರ ತೋಟದಲ್ಲಿ ಕಾಫಿ, ಬಾಲೆ, ಫಸಲು ಬರಿತ ತೆಂಗಿನ ಮರವನ್ನು ನಾಶ ಪಡಿಸಿದಲ್ಲದೇ, ಮನೆಯ ಮುಂದಿದ್ದ ಗಿಡಗಳಿಗೆ ಹಾನಿ ಮಾಡಿ ನಷ್ಟ ಉಂಟುಮಾಡಿದೆ. ಇದರಿಂದಾಗಿ ವಿದ್ಯುತ್ ತಂತಿಗಳು ತುಂಡಾಗಿ ವಿದ್ಯುತ್ ಸ್ಥಗಿತಗೊಂಡಿದೆ. ಮನೆಯಂಗಳಕ್ಕೆ ಬಂದಿರುವ ಕಾಡಾನೆಯ ಚಲನವಲನಗಳು ಸಿ ಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾದೆ. ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.









