
ಮಡಿಕೇರಿ ಜೂ.19 NEWS DESK : ಕೊಡಗಿನ ಕವಿ, ಬರಹಗಾರ, ಕೊಡಗು ಜಿಲ್ಲಾ ದಸಾಪ ಅಧ್ಯಕ್ಷ ಅರ್ಜುನ್ ಮೌರ್ಯ ಗೆ 2025ರ ರಾಷ್ಟ್ರಮಟ್ಟದ “ಇಂಡಿಯನ್ ಐಕಾನಿಕ್ ಆಥರ್ -2025” ಅವಾಡ್೯ ಲಭಿಸಿದೆ. ಅರ್ಜುನ್ ಮೌರ್ಯ ಅವರ ಸಾಹಿತ್ಯ ಸೇವೆ ಗುರುತಿಸಿ “ಪ್ರೈಡ್ ಇಂಡಿಯಾ ಅವಾಡ್೯” ಸಂಸ್ಥೆಯ ವತಿಯಿಂದ ಹೈದರಾಬಾದ್ ನ ‘ದಿ ಪಾಕ್೯’ ಹೊಟೇಲ್ ನಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್ ತಾರೆ ಕಾವ್ಯ ತಾಪರ್ ಹಾಗೂ ಪ್ರೈಡ್ ಇಂಡಿಯಾ ಅವಾಡ್೯ ಸಂಸ್ಥೆಯ ಸಿಇಓ ವಿನಯ್ ಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದರು. ಇತ್ತೀಚೆಗಷ್ಟೇ ಅರ್ಜುನ್ ಮೌರ್ಯ ಅವರ “ಬೆಂದೊಡಲ ಕುಣಿತ” ಕಾವ್ಯ ಸಂಕಲನವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದರಾಜ್ ಕೊಡಗು ವಿಶ್ವವಿದ್ಯಾಲಯದಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಬಿಡುಗಡೆ ಮಾಡಿದ್ದರು. ಅರ್ಜುನ್ ಮೌರ್ಯ ಅವರು ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ವಿರಾಜಪೇಟೆ ಸೈಂಟ್ ಆನ್ಸ್ ಪದವಿ ಕಾಲೇಜಿನ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.










