ಮಡಿಕೇರಿ ಜೂ.23 NEWS DESK : ಸುಂಟಿಕೊಪ್ಪ ಹೋಬಳಿಯ ಕಾನ್ ಬೈಲು ಬೈಚನಹಳ್ಳಿ ಗ್ರಾಮದಲ್ಲಿ ಮಳೆಯಿಂದ ಮನೆಯ ಗೋಡೆ ಕುಸಿತಗೊಂಡಿದೆ. ಗ್ರಾಮದ ನಿವಾಸಿ ಪಿ.ಬಿ.ಗುರುವ ಎಂಬವರ ಮನೆಯ ಹಿಂಬದಿಯ ಗೋಡೆ ರಾತ್ರಿ ಸುರಿದ ಬಾರಿ ಮಳೆ ಗಾಳಿಯಿಂದ ಕುಸಿದು ಹಾನಿಯಾಗಿದೆ. ಸ್ಥಳಕ್ಕೆ ಸುಂಟಿಕೊಪ್ಪ ಹೋಬಳಿ ಕಂದಾಯ ಪರೀವಿಕ್ಷಕರು ಹಾಗೂ ನಾಕೂರು ಶಿರಂಗಾಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಂಟಿ ಪರಿಶೀಲಿಸಿದರು. ಮಡಿಕೇರಿ ತಾಲ್ಲೂಕು ಕಾಟಕೇರಿ ಗ್ರಾಮದ ಅಶ್ವಥ್ ಭಟ್ ಎಂಬುವರ ವಾಸದ ಮನೆಯ ಗೋಡೆ ಮಳೆ ಗಾಳಿಯಿಂದಾಗಿ ಕುಸಿದು ಹಾನಿಯಾಗಿದೆ.












