ಮಡಿಕೇರಿ NEWS DESK ಜೂ.23 : ಗಾರೆ ಕೆಲಸಕ್ಕೆಂದು ಶ್ರೀಮಂಗಲಕ್ಕೆ ಬಂದಿದ್ದ ತಮಿಳುನಾಡು ರಾಜ್ಯದ ದಿಂಡಿಕ್ಕಲ್ ಜಿಲ್ಲೆಯ ನಾಗೂರು ಮೂಲದ ಕುಮಾರ ಕೆ. ಎಂಬುವವರು ನಾಪತ್ತೆಯಾಗಿರುವ ಕುರಿತು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಮಾರ ಅವರ ಪತ್ನಿ ಪೇಚಿಯಮ್ಮ ಎಂಬುವವರು ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜೂ.1 ರಂದು ಪತಿ ಕುಮಾರ ಅವರು ಊರಿನಿಂದ ಸ್ನೇಹಿತರೊಂದಿಗೆ ಗಾರೆ ಕೆಲಸಕ್ಕೆಂದು ಹೋದವರು ಶ್ರೀಮಂಗಲದಲ್ಲಿ ತಂಗಿದ್ದರು. ಜೂ.15 ರಂದು ನನಗೆ ಕರೆ ಮಾಡಿ ನಾನು ಅನಾರೋಗ್ಯಕ್ಕೆ ಒಳಗಾಗಿದ್ದು, ಊರಿಗೆ ಮರಳುತ್ತೇನೆ ಎಂದು ಹಾಗೂ ಜೂ.16 ರಂದು ನಾನು ಊರಿಗೆ ಬರುತ್ತಿದ್ದು, ಬಸ್ ನಲ್ಲಿದ್ದೇನೆ ಎಂದು ತಿಳಿಸಿದ್ದರು. ಆದರೆ ಕುಮಾರ ಅವರು ಇಲ್ಲಿಯವರೆಗೆ ಮನೆಗೆ ಬಂದಿರುವುದಿಲ್ಲ, ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಬರುತ್ತಿದೆ ಎಂದು ಪೇಚಿಯಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಕುಮಾರ ಅವರು ಪತ್ತೆಯಾದರೆ ಶ್ರೀಮಂಗಲ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. *ಕಾಣೆಯಾದ ವ್ಯಕ್ತಿಯ ಚಹರೆ* ಹೆಸರು : ಕುಮಾರ ಕೆ. ತಂದೆ : ಕೃಷ್ಣಸ್ವಾಮಿ, ಪ್ರಾಯ : 40 ವರ್ಷ, 5″ 7″ ಅಡಿ ಎತ್ತರ, ಬಣ್ಣ : ಗೋದಿ ಮೈಬಣ್ಣ, ಚಹರೆ : ಸಾಧಾರಣ ಮೈಕಟ್ಟು, ಕೋಲು ಮುಖ, ಬಾಷೆ : ತಮಿಳು, ತೆಲಗು ಭಾಷೆ ಮಾತನಾಡುತ್ತಾರೆ, ತಲೆಕೂದಲು: ಕಪ್ಪು ತಲೆಕೂದಲು, ಕುರುಚಲು ಗಡ್ಡ, ಬಟ್ಟೆ : ನೀಲಿ ಬಣ್ಣದ ಪ್ಯಾಂಟ್, ತಿಳಿ ಹಸಿರು ಬಣ್ಣದ ಟೀ ಶರ್ಟ್, ಶೂ ಧರಿಸಿರುತ್ತಾರೆ. ಆದುದರಿಂದ ಈ ಮೇಲ್ಕಂಡ ಚಹರೆ ಹಾಗೂ ಭಾವಚಿತ್ರದಲ್ಲಿರುವ ಕಾಣೆಯಾದ ವ್ಯಕ್ತಿ ಪತ್ತೆಯಾದಲ್ಲಿ ಈ ಕೆಳಕಂಡ ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ. ಮಾಹಿತಿ ನೀಡಬೇಕಾದ ದೂರವಾಣಿ ಸಂಖ್ಯೆ:- 08272-229000 1) ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆ ಮಡಿಕೇರಿ:- 08274-257488, 2)ಪೊಲೀಸ್ ಉಪ ಅಧೀಕ್ಷಕರು ವಿರಾಜಪೇಟೆ ಉಪ ವಿಭಾಗ:- 08274-244100, 3)ಪೊಲೀಸ್ ವೃತ್ತ ನಿರೀಕ್ಷಕರು ಕುಟ್ಟ ವೃತ್ತ;- 08274-246246, 4) ಪೊಲೀಸ್ ಉಪ ನಿರೀಕ್ಷಕರು ಶ್ರೀಮಂಗಲ ಠಾಣೆ:- ಪೊಲೀಸ್ ಆರೀಕ್ಷಕರು SRIMANGALA POLICE STATION SRIMANGALA










