


ನಾಪೋಕ್ಲು ಜೂ.24 NEWS DESK : ಬೆಟ್ಟತ್ತೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರೈತರು ಪರದಾಡುವಂತಾಗಿದೆ. ಗ್ರಾಮದಲ್ಲಿ ಕಾಡಾನೆಗಳ ಹಿಂಡು ನಿರಂತರ ದಾಂಧಲೆ ನಡೆಸುತ್ತಿದ್ದು, ಕಾಫಿ, ತೆಂಗು, ಬಾಳೆ ಗಿಡಗಳನ್ನು ನಾಶಪಡಿಸಿವೆ. ಗ್ರಾಮದ ನಿವಾಸಿ ಮರದಾಳು ರಾಮಚಂದ್ರ ಅವರ ಮನೆಯ ಸುತ್ತಮುತ್ತ ದಾಳಿ ನಡೆಸಿರುವ ಕಾಡಾನೆಗಳ ಹಿಂಡು ತೆಂಗು, ಬಾಳೆ ಗಿಡಗಳನ್ನು ಸಂಪೂರ್ಣ ಧ್ವಂಸಗೊಳಿಸಿವೆ. ಅಲ್ಲದೆ ಕೃಷಿ ಪಸಲುಗಳಿಗೆ ಹಾನಿ ಉಂಟು ಮಾಡಿದೆ. ಇತ್ತೀಚೆಗೆ ನೆಟ್ಟ ಹಣ್ಣಿನಗಿಡಗಳೂಧ್ವಂಸವಾಗಿವೆ. ಕಾಡಾನೆಗಳ ಉಪಟಳವನ್ನು ತಡೆಗಟ್ಟಲು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.










