Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ : ಪೋಲಿಯೋ ಹನಿ ಹಾಕಿಸಿಕೊಂಡ ಕೊಡಗಿನ ಮಕ್ಕಳು*
  • *ವಿರಾಜಪೇಟೆ : ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು*
  • *ಮಾಧ್ಯಮ ಸ್ಪಂದನ ತಂಡದ ಕೊಡುಗೆ ಅಪಾರ: ವಿ.ಪಿ.ಶಶಿಧರ್*
  • *ಅತೀ ಶೀಘ್ರದಲ್ಲಿ ಕಾರ್ಡಿಯಾಲಜಿ ಯೂನಿಟ್ ಲಭ್ಯ: ಶಾಸಕ ಡಾ.ಮಂತರ್ ಗೌಡ*
  • *ಕೆ.ಬಾಡಗ : ವಿವಿಧ ರಸ್ತೆ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ*
  • *ಕಾಳ ಅವರ ಆರೋಗ್ಯ ವಿಚಾರಿಸಿದ ಶಾಸಕ ಎ.ಎಸ್.ಪೊನ್ನಣ್ಣ*
  • *ಇನ್ನರ್ ವೀಲ್ ಅಧ್ಯಕ್ಷಯಾಗಿ ರಶ್ಮಿ ಪ್ರವೀಣ್, ಕಾಯ೯ದಶಿ೯ಯಾಗಿ ಮೃಣಾಲಿನಿ ಚಿಣ್ಣಪ್ಪ ಆಯ್ಕೆ*
  • *ಕೊಡಗು ಪತ್ರಕತ೯ರ ಸಂಘದ ವಾಷಿ೯ಕ ಪ್ರಶಸ್ತಿ ಪ್ರಕಟ : ಅತ್ಯುತ್ತಮ ವರದಿಗಳಿಗಾಗಿ  8 ಪತ್ರಕತ೯ರಿಗೆ ಪ್ರಶಸ್ತಿ*
  • *ನಾನೂ ನಾಯಕಿ-2026 ಶಿಬಿರ : ಕೊಡಗಿನ ಐವರು ಮಹಿಳಾ ಪ್ರತಿನಿಧಿಗಳು ಭಾಗಿ*
  • *ಮಡಿಕೇರಿಯಲ್ಲಿ ಕೆಂಪೇಗೌಡರ ಜಯಂತಿ ಆಚರಣೆ : ಕೆಂಪೇಗೌಡರ ದೂರದೃಷ್ಟಿಯಂತೆ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಬೇಕು : ಶಾಸಕ ಡಾ.ಮಂತರ್ ಗೌಡ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಮಾಧ್ಯಮ ಸ್ಪಂದನ ತಂಡದ ಕೊಡುಗೆ ಅಪಾರ: ವಿ.ಪಿ.ಶಶಿಧರ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಮಾಧ್ಯಮ ಸ್ಪಂದನ ತಂಡದ ಕೊಡುಗೆ ಅಪಾರ: ವಿ.ಪಿ.ಶಶಿಧರ್*

ಜೂನ್ 28, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಕುಶಾಲನಗರ ಜೂ.28 NEWS DESK : ಸಮಾಜ ಸೇವೆಯ ಮೂಲಕ ಜನರ ಮನಸ್ಸನ್ನು ಗೆದ್ದಿರುವ ಕೊಡಗಿನ ಮಾಧ್ಯಮ ಸ್ಪಂದನ ತಂಡದ ಕೊಡುಗೆ ಅಪಾರವಾದದ್ದು ಎಂದು ತಾಲ್ಲೂಕು ಗ್ಯಾರಂಡಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಅಭಿಪ್ರಾಯಪಟ್ಟರು. ಮಾಧ್ಯಮ ಸ್ಪಂದನ, ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ, ಕೊಡಗು ರಕ್ತನಿಧಿ ಕೇಂದ್ರ ಹಾಗೂ ಸೈರಸ್ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಕುಶಾಲನಗರದ ಸೈರಸ್ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡಗಿನ ಪತ್ರಕರ್ತರು ಮಾಧ್ಯಮ ಸ್ಪಂದನ ತಂಡವನ್ನು ಕಟ್ಟಿ ಸಮಾಜಮುಖಿ ಕೆಲಸಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿದ್ದಾರೆ‌. ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಿ ಅಮೂಲ್ಯವಾದ ಜೀವಗಳನ್ನು ಉಳಿಸುವ ಪ್ರಯತ್ನ ಮಾಡಿರುವ ಮಾಧ್ಯಮ ಸ್ಪಂದನ ತಂಡದ ಕಾರ್ಯ ಶ್ಲಾಘನೀಯ ಎಂದರು. ಪ್ರಾಸ್ತಾವಿಕ ನುಡಿ ನುಡಿದ ಮಾಧ್ಯಮ‌ ಸ್ಪಂದನದ ಸ್ಥಾಪಕ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಸಮಾಜದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುವಾದ ವಿಘ್ನಗಳು ಎದುರಾಗುತ್ತವೆ‌. ಅವುಗಳನ್ನು ಮನಸ್ಸಿಗೆ ಹಾಕದೇ, ನಾವು ಮಾಡುವ ಸೇವೆಗೆ ಯಾವುದೇ ಫಲವನ್ನು ಅಪೇಕ್ಷಿಸದೇ ಕೆಲಸ ಮಾಡಬೇಕು ಎಂದ ಅವರು, ರಕ್ತದಾನ ಶಿಬಿರದ ಮೂಲಕ ಸಂಗ್ರಹಿಸುವ ರಕ್ತ ರಕ್ತನಿಧಿ ಕೇಂದ್ರಕ್ಕೆ ನೀಡಲಾಗುತ್ತದೆ‌. ಇದರಲ್ಲಿ ಯಾವುದೇ ರೀತಿಯ ದುರುಪಯೋಗ ಆಗುವುದಿಲ್ಲ ಎಂದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಅನು ಕಾರ್ಯಪ್ಪ ಮಾತನಾಡಿ, ರಕ್ತದ ಅಗತ್ಯವಿದ್ದವರಿಗೆ ಮಾತ್ರ ರಕ್ತದ ಪ್ರಾಮುಖ್ಯತೆ ತಿಳಿದಿರುತ್ತದೆ. ಇಂತಹ ಶಿಬಿರಗಳು ಹಲವಾರು ಜೀವಗಳನ್ನು ಉಳಿಸಲು ಸಹಕಾರಿ ಎಂದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾದ ಸವಿತಾ ರೈ ಮಾತನಾಡಿ, ಮಾಧ್ಯಮ ಸ್ಪಂದನ ತಂಡ 2019 ರಿಂದಲೂ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದು, ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರು. ಗೌರವ ಅತಿಥಿಯಾಗಿ ಆಗಮಿಸಿದ್ದ ಜಿ‌.ಎಲ್.ನಾಗರಾಜ್ ಮಾತನಾಡಿ, ರಕ್ತದಾನ ಶ್ರೇಷ್ಠದಾನವಾಗಿದೆ. ಮಾಧ್ಯಮ ಸ್ಪಂದನ ತಂಡ ಬೃಹತ್ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ನಡೆಸಿದೆ. ನಿಮ್ಮ ಸೇವೆಗೆ ಧನ್ಯವಾದಗಳು. ಇನ್ನೂ ಹೆಚ್ಚು ಸಮಾಜಮುಖಿ ಕೆಲಸಗಳು ನಿಮ್ಮಿಂದಾಗಲಿ ಎಂದರು. ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ರಕ್ತದಾನ ಶಿಬಿರದ ಸಂಚಾಲಕ ಕೆ.ಬಿ‌.ಶಂಶುದ್ಧೀನ್ ಮಾತನಾಡಿ, ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ರಕ್ತದಾನ ಶಿಬಿರದ ಜವಾಬ್ದಾರಿ ನೀಡಿದ ಮಾಧ್ಯಮ ಸ್ಪಂದನ ತಂಡದ ಸ್ಥಾಪಕರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರಿಗೆ ತಂಡದ ಎಲ್ಲಾ ಸದಸ್ಯರಿಗೆ ಧನ್ಯವಾದಗಳು ಎಂದರು. ಕೊಡಗು ರಕ್ತನಿಧಿ ಕೇಂದ್ರದ ಮುಖ್ಯಸ್ಥರಾದ ಡಾ.ಕೆ.ಪಿ.ಕರುಂಬಯ್ಯರವರು, ರಕ್ತ ಹಾಗೂ ರಕ್ತದಾನದ ಪ್ರಾಮುಖ್ಯತೆ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ ಸ್ಮರಣಿಕೆ ವಿತರಿಸಲಾಯಿತು. ಶಿಬಿರದಲ್ಲಿ ಒಟ್ಟು 90 ದಾನಿಗಳಿಂದ ರಕ್ತವನ್ನು ಸಂಗ್ರಹಿಸಲಾಯಿತು. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಸಂಘ ಸಂಸ್ಥೆಗಳ ಪ್ರಮುಖರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರದಲ್ಲಿ ಪತ್ರಕರ್ತರಿಗೆ ಹಾಗೂ ಕುಟುಂಬಸ್ಥರಿಗೆ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು‌. ಕುಶಾಲನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಮ್.ಎನ್‌.ಚಂದ್ರಮೋಹನ್ ಮಾತನಾಡಿದರು. ಮಾಧ್ಯಮ ಸ್ಪಂದನ ತಂಡದ ಸದಸ್ಯ ರೆಜಿತ್ ಕುಮಾರ್ ನಿರೂಪಿಸಿದರು. ಟಿ.ಆರ್‌.ಪ್ರಭುದೇವ್ ಸ್ವಾಗತಿಸಿದರು. ಎಚ್‌.ಸಿ‌.ಜಯಪ್ರಕಾಶ್ ವಂದಿಸಿದರು.
ಈ‌ ಸಂದರ್ಭ ಸೈರಸ್ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸೆ ತಜ್ಞರಾದ ಟಿ.ಪಿ.ಜಿನಾಶ್, ಮಾಧ್ಯಮ ಸ್ಪಂದನ ತಂಡದ ಸದಸ್ಯರಾದ ಅರುಣ್, ಪತ್ರಕರ್ತರಾದ ರಘು ಹೆಬ್ಬಾಲೆ, ನಾಗರಾಜ ಶೆಟ್ಟಿ, ಮುಸ್ತಫಾ, ಶಿವರಾಜ್ಣ ಅಕ್ಷಯ್, ಪ್ರದೀಪ್, ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳು, ಸೈರಸ್ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ : ಪೋಲಿಯೋ ಹನಿ ಹಾಕಿಸಿಕೊಂಡ ಕೊಡಗಿನ ಮಕ್ಕಳು*

ಜೂನ್ 28, 2026

*ವಿರಾಜಪೇಟೆ : ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು*

ಜೂನ್ 28, 2026

*ಅತೀ ಶೀಘ್ರದಲ್ಲಿ ಕಾರ್ಡಿಯಾಲಜಿ ಯೂನಿಟ್ ಲಭ್ಯ: ಶಾಸಕ ಡಾ.ಮಂತರ್ ಗೌಡ*

ಜೂನ್ 28, 2026

*ವಿರಾಜಪೇಟೆ : ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಅರಿವು*

ಜೂನ್ 28, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಜೂ.28 NEWS DESK : ವಿರಾಜಪೇಟೆಯ ಕಾವೇರಿ ಪದವಿ ಪೂರ್ವ  ಕಾಲೇಜಿನಲ್ಲಿ  ಕಾನೂನು ಮತ್ತು ಮಹಿಳೆಯರಿಗೆ ಲೈಂಗಿಕ ಶಿಕ್ಷಣದ…

*ಮಾಧ್ಯಮ ಸ್ಪಂದನ ತಂಡದ ಕೊಡುಗೆ ಅಪಾರ: ವಿ.ಪಿ.ಶಶಿಧರ್*

ಜೂನ್ 28, 2026

*ಅತೀ ಶೀಘ್ರದಲ್ಲಿ ಕಾರ್ಡಿಯಾಲಜಿ ಯೂನಿಟ್ ಲಭ್ಯ: ಶಾಸಕ ಡಾ.ಮಂತರ್ ಗೌಡ*

ಜೂನ್ 28, 2026

*ಕೆ.ಬಾಡಗ : ವಿವಿಧ ರಸ್ತೆ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ*

ಜೂನ್ 27, 2026

*ಕಾಳ ಅವರ ಆರೋಗ್ಯ ವಿಚಾರಿಸಿದ ಶಾಸಕ ಎ.ಎಸ್.ಪೊನ್ನಣ್ಣ*

ಜೂನ್ 27, 2026

*ಇನ್ನರ್ ವೀಲ್ ಅಧ್ಯಕ್ಷಯಾಗಿ ರಶ್ಮಿ ಪ್ರವೀಣ್, ಕಾಯ೯ದಶಿ೯ಯಾಗಿ ಮೃಣಾಲಿನಿ ಚಿಣ್ಣಪ್ಪ ಆಯ್ಕೆ*

ಜೂನ್ 27, 2026

*ಕೊಡಗು ಪತ್ರಕತ೯ರ ಸಂಘದ ವಾಷಿ೯ಕ ಪ್ರಶಸ್ತಿ ಪ್ರಕಟ : ಅತ್ಯುತ್ತಮ ವರದಿಗಳಿಗಾಗಿ  8 ಪತ್ರಕತ೯ರಿಗೆ ಪ್ರಶಸ್ತಿ*

ಜೂನ್ 27, 2026

*ನಾನೂ ನಾಯಕಿ-2026 ಶಿಬಿರ : ಕೊಡಗಿನ ಐವರು ಮಹಿಳಾ ಪ್ರತಿನಿಧಿಗಳು ಭಾಗಿ*

ಜೂನ್ 27, 2026

*ಮಡಿಕೇರಿಯಲ್ಲಿ ಕೆಂಪೇಗೌಡರ ಜಯಂತಿ ಆಚರಣೆ : ಕೆಂಪೇಗೌಡರ ದೂರದೃಷ್ಟಿಯಂತೆ ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಬೇಕು : ಶಾಸಕ ಡಾ.ಮಂತರ್ ಗೌಡ*

ಜೂನ್ 27, 2026

*ಕುಶಾಲನಗರದಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಶ್ರೀ ಚೌಡೇಶ್ವರಿ ದೇವಿ ವಾರ್ಷಿಕೋತ್ಸವ*

ಜೂನ್ 27, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.