
ಮಡಿಕೇರಿ ಜೂ.28 NEWS DESK : ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಅವರ 516ನೇ ಜನ್ಮದಿನೋತ್ಸವದಲ್ಲಿ ಸಾಹಿತ್ಯ ಕ್ಷೇತ್ರದ ಸಾಧನೆಗೆ ಬಾರಿಯಂಡ ಜೋಯಪ್ಪ ಅವರನ್ನು ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನ ರಾಜ್ಯಮಟ್ಟದ ‘ಕರುನಾಡ ಪ್ರಭು ಕೆಂಪೇಗೌಡ’ ಪ್ರಶಸ್ತಿ ನೀಡಿ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಸನ್ಮಾನಿಸಿದರು. ಪ್ರಶಸ್ತಿಯು ಸ್ಮರಣಿಕೆಯೊಂದಿಗೆ ಬೆಳ್ಳಿ ಪದಕ ಮತ್ತು 25ಸಾವಿರ ನಗದನ್ನು ಹೊಂದಿಗೆ ಸನ್ಮಾನದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಬಾರಿಯಂಡ ಜೋಯಪ್ಪ ಅವರು, “ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಮತ್ತು ಸಾಹಿತ್ಯ ಸೇವೆಯನ್ನು ಪರಿಗಣಿಸಿ ನನ್ನನ್ನು ನಾಡ ಪ್ರಭು ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ ಮಾಡಿ ಸನ್ಮಾನಿಸಿ ಗೌರವಿಸಿದ್ದು ನನಗೆ ಅತೀವ ಖುಷಿ ಕೊಟ್ಟಿದೆ ” ಎಂದರು. ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಾ.ಸಿ ಎನ್.ಅಶ್ವಥ್ ನಾರಾಯಣ್, ಪ್ರತಿಷ್ಠಾನ ಅಧ್ಯಕ್ಷರಾದ ಪ್ರೊ. ಎಂ.ಕೃಷ್ಣ ಗೌಡ, ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕೇಂದ್ರ ಸಚಿವ ಪ್ರಹಲ್ಲಾದ್ ಜೋಶಿ, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಹಾಗು ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.
*ಬಾರಿಯಂಡ ಜೋಯಪ್ಪ ಪರಿಚಯ* ಇವರು ಮಡಿಕೇರಿ ಸಮೀಪ ಮದೆನಾಡಿನ ಮದೆ ಮಹೇಶ್ವರ ಪ್ರೌಢ ಶಾಲೆ ಯಲ್ಲಿ ಶಿಕ್ಷರಾಗಿ, ಮುಖ್ಯ ಅಧ್ಯಪಕರಾಗಿ,ಅದೇ ಕಾಲೇಜಿನಲ್ಲಿ ಪ್ರಾಚಾರ್ಯ ರಾಗಿ 35 ವರ್ಷ ಸೇವೆ ಸಲ್ಲಿಸಿದ್ದಾರೆ. ಪ್ರಶಸ್ತಿ ಅಧ್ಯಕ್ಷತೆ: 1996 ರಲ್ಲಿ ಶಿಕ್ಷಣ ಇಲಾಖೆಯ ಉತ್ತಮ ಶಿಕ್ಷಕ ಜಿಲ್ಲಾ ಪ್ರಶಸ್ತಿ, 2008 ರಲ್ಲಿ ರಾಜ್ಯಉತ್ತಮ ಶಿಕ್ಷಕರ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2013 ̲ 14 ರಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, 2013 ರಲ್ಲಿ ಮಡಿಕೇರಿ ತಾಲ್ಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಧ್ಯಕ್ಷತೆಯ ಗೌರವ. :: 10 ಪುಸ್ತಕ ಪ್ರಕಟಣೆ :: ಯಾರಬೇಟೆ ಮತ್ತು ಇತರ ಪ್ರಸಂಗಗಳು:ಪ್ರಕಾಶಕರು, ಕನ್ನಡ ಸಂಘ, ಕ್ರೈಸ್ಟ್ ಕಾಲೇಜು, ಬೆಂಗಳೂರು, ಚಾಂಪಾ (ಅರೆಬಾಸೆ) ಹಾಸ್ಯ ಮಯ ಸಣ್ಣ ಕತೆಗಳು. ಪ್ರಕಾಶಕರು ಕೊಡಗು ಗೌಡ ವಿದ್ಯಾಸಂಘ ಮಡಿಕೇರಿ, ಸಾಧಕರ ಹೆಜ್ಜೆಗಳು ಮತ್ತು ಹಳ್ಳಿಯ ಹಣತೆಗಳು ಪ್ರಕಾಶಕರು, ಶ್ರೀ ಆದಿಚುಂಚನಗಿರಿ ವಿಶ್ವವಿದ್ಯಾನಿಲಯ, ತೋರಣ ಮತ್ತು ಆಕಾಶ ಚಪ್ಪರ ಅರೆಭಾಷೆ ಕವನ ಸಂಕಲನ ಹಾಗೂ ಚೆಂಚಿ ಲಲಿತ ಪ್ರಬಂಧ ಮತ್ತು ಕಾವೇರಿ ಮನೆ ಬೋಜಪ್ಪ ವ್ಯಕ್ತಿ ಪರಿಚಯ, ಪ್ರಕಾಶಕರು ಕರ್ನಾಟಕ ಅರೇಬಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಟಿಬೆಟ್ಟದ ಕತೆಗಳು. ಮತ್ತು ಬದುಕು ಪುಸ್ತಕಗಳ ಪ್ರಕಾಶಕರು ಚಿಂತನ ಚಿತ್ತಾರ, ಮೈಸೂರು. :: ಆಕಾಶವಾಣಿ, ಮಡಿಕೇರಿ :: ಚಿಂತನ, ಸ್ನೇಹ ಕಾವೇರಿ ಮತ್ತು ಅರೆಬಾಸೆ ಐಸಿರಿಯಲ್ಲಿ ನಾಟಕ, ರೂಪಕಗಳ ಪ್ರಸಾರ, ಅರೆಬಾಷೆಯ 108 ಭಕ್ತಿ ಗೀತೆ ಗಳ ತಿದ್ದುಪಡಿಗೆ ಸಹಾಯ ಮತ್ತು ಇವರ ಭಕ್ತಿ ಗೀತೆಗಳು ಆಗಿಂದಾಗೆ ಪ್ರಸಾರ ಹಾಗೂ 20 ಭಾವಗೀತೆಗಳ ತಿದ್ದುಪಡಿ. ಯು ಟ್ಯೂಬ್ ನಲ್ಲಿ ಅರೆಬಾಸೆ ಕತೆ,ಮತ್ತು ಭಾವಗೀತೆಗಳ ಪ್ರಸಾರ. ಸುಬೆಧಾರ ಗುಡ್ಡೆಮನೆ ಅಪ್ಪೆಗೌಡರ ಪುತ್ತಳಿಯ ಶಿಲೆಯಲ್ಲಿ ಇವರ ಕವನದ ಕೆತ್ತನೆ ಆಗಿದೆ. :: ಸಂಪಾದಕನಾಗಿ : : ಬೆಳ್ಳಿಬೆಳಕು, ಕದಿರು, ನಮನ ಸ್ಮರಣ ಸಂಚಿಕೆಗಳ ಪ್ರಧಾನ ಸಂಪಾದಕ. ಕರ್ನಾಟಕ ಅರೆಬಾಸೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪಾರಂಪರಿಕ ವಸ್ತುಕೋಷದ ಸಂಪಾದಕ, ಅರೆಬಾಷೆ ಪದಕೋಷದ 18 ಸಾವಿರ ಪದಗಳ ಕರಡು ಪ್ರತಿಯ ಓದು ಮತ್ತು ತಿದ್ದುಪಡಿ. ಅದೇ ಸಂಸ್ಥೆಯ ಹಿಂಗಾರ ತ್ರೈ ಮಾಸಿಕದ ಸಂಪಾದಕನಾಗಿಸೇವೆ ಹಾಗು ಅಕಾಡೆಮಿಯ ಸದಸ್ಯನಾಗಿ ಸೇವೆ ಸಲ್ಲಿಸಿರುತ್ತಾರೆ.










