
ಸುಂಟಿಕೊಪ್ಪ ಜು.2 NEWS DESK : ಗುಂಡುಗುಟ್ಟಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಸೂಟ್ ವಿತರಿಸಲಾಯಿತು. ಸ್ಥಳೀಯ ಮುತ್ತಿನ ತೋಟದ ಮಾಲೀಕರಾದ ರಾಜೇಂದ್ರ ಹಾಗೂ ಸಾಧನ ಅವರು ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡಿದ ಟ್ರ್ಯಾಕ್ ಶೂಟ್‍ಅನ್ನು ವಿತರಿಸಿದರು. ಇದೇ ವೇಳೆ ಮುತ್ತಿನ ತೋಟದ ವ್ಯವಸ್ಥಾಪಕ ಪ್ರದೀಪ್ ಮಕ್ಕಳಿಗೆ ಸಮವಸ್ತ್ರವನ್ನು ವಿತರಿಸಿದರು. ತೋಟದ ಮಾಲೀಕರಾದ ರಾಜೇಂದ್ರ ಮಾತನಾಡಿ ಈ ಭಾಗದಲ್ಲಿ ಹೆಚ್ಚಾಗಿ ಕೂಲಿಕಾರ್ಮಿಕರ ಮಕ್ಕಳೇ ವಿದ್ಯಾಭ್ಯಾಸಕ್ಕೆ ಬರುತ್ತಿದ್ದಾರೆ ಅವರ ಭವಿಷ್ಯದ ದೃಷ್ಟಿಯಿಂದ ಮಕ್ಕಳಲ್ಲಿ ಇನ್ನಷ್ಟು ಓದಿನಲ್ಲಿ ಆಸಕ್ತಿ ಮೂಡುವ ದೃಷ್ಟಿಯಿಂದ ನಮ್ಮಿಂದಾದ ಸಣ್ಣ ಸಹಾಯ ಮಾಡುತ್ತಿದ್ದೇವೆ ಎಂದರು. ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕಿ ಗೌರಮಣಿ ಮತ್ತು ಶಿಕ್ಷಕಿ ಪೂರ್ಣಿಮಾ ಇದ್ದರು.










