
ಮಡಿಕೇರಿ ಜು.2 NEWS DESK : ಕೊಡ್ಲಿಪೇಟೆ ಎಸ್.ಕೆ.ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ಸಂಸತ್ತು ಚುನಾವಣೆ ನಡೆಯಿತು. ಕೇಂದ್ರ ಮತ್ತು ರಾಜ್ಯಗಳಿಗೆ ನಡೆಯುವ ಸಾರ್ವಜನಿಕ ಮಾದರಿಯ ಚುನಾವಣಾ ನಿಯಮಾನುಸಾರ ಶಾಲಾ ವಿದ್ಯಾರ್ಥಿಗಳಿಗೆ ಮತದಾನದ ಹಕ್ಕನ್ನು ಚಲಾಯಿಸುವ ಬಗ್ಗೆ ತಿಳುವಳಿಕೆ ಬರುವ ರೀತಿಯಲ್ಲಿ ಶಾಲಾ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಎಲೆಕ್ಟ್ರಾನಿಕ್ ಯಂತ್ರವಾಗಿ ಮೊಬೈಲ್‍ನಲ್ಲಿ ಇ.ವಿ.ಎಂ ಆ್ಯಪ್ ಮೂಲಕ ಗೌಪ್ಯವಾಗಿ ಮತ ಚಲಾವಣೆ ಮಾಡಿದರು. ಚುನಾವಣಾ ಅಧಿಕಾರಿಯಾಗಿ ಶಾಲಾ ಮುಖ್ಯೋಪಾಧ್ಯಾಯರಾದ ಹೆಚ್.ಎಂ.ಅಭಿಲಾಷ್, ಸಹಾಯಕ ಅಧಿಕಾರಿಯಾಗಿ ಕೆ.ಎಸ್.ಧನಲಕ್ಷ್ಮಿ, ಪೊಲೀಸ್ ಅಧಿಕಾರಿಗಳಾಗಿ 10ನೇ ತರಗತಿಯ ವಂಶಿತ್, ಸುಜನ್ ಮತ್ತು ಯಶಸ್ ಗೌಡ ಸೇರಿದಂತೆ ಸಹಾಯಕ ಚುನಾವಣಾ ಸಿಬ್ಬಂದಿಗಳಾಗಿ ಶಿಕ್ಷಕರು ಕರ್ತವ್ಯ ನಿರ್ವಹಿಸಿದರು. ಮುಖ್ಯಮಂತ್ರಿಯಾಗಿ ಕೆ.ಎ.ವಿಕಾಸ್, ಉಪ ಮುಖ್ಯಮಂತ್ರಿಯಾಗಿ ಎಂ.ಎಂ.ತನ್ಮಯ್, ಕಾರ್ಯದರ್ಶಿಯಾಗಿ ಎ.ವೈ.ತನ್ಮಯಿ, ಕ್ರೀಡಾ ಸಚಿವರಾಗಿ ಕೆ.ಕೆ.ಸಾನ್ವಿ, ಉಪ ಕ್ರೀಡಾ ಸಚಿವರಾಗಿ ಮಿಥುನ್, ಆಹಾರ ಸಚಿವರಾಗಿ ಕೆ.ಎಂ.ಪ್ರೀತಮ್ ಗೌಡ, ಉಪ ಆಹಾರ ಸಚಿವರಾಗಿ ಹೆಚ್.ವಿ.ದುಶ್ಯಂತ್ ಗೌಡ, ಆರೋಗ್ಯ ಸಚಿವರಾಗಿ ಹೆಚ್.ಸಿ.ಕುಲ್‍ದೀಪ್ ಗೌಡ, ಉಪ ಆರೋಗ್ಯ ಸಚಿವರಾಗಿ ವೈ.ಪಿ.ಸಮೃದ್, ತೋಟಗಾರಿಕೆ ಸಚಿವರಾಗಿ ಬಿ.ಎಸ್.ಬೆನಕ, ಸಾಂಸ್ಕೃತಿಕ ಸಚಿವರಾಗಿನ್.ಎ.ಮೊಹಂಕ, ಉಪ ಸಾಂಸ್ಕೃತಿಕ ಸಚಿವರಾಗಿ ಕೆ.ಎಂ.ಜಾನ್ಹಾವಿ ಮತ್ತು ಹಣಕಾಸಿನ ಸಚಿವರಾಗಿ ಖಲಂದರ್ ಆಯ್ಕೆಯಾಗಿದ್ದಾರೆ. ಶಾಲೆಯ ಅಧ್ಯಕ್ಷರಾದ ಶ್ರೀ ಶ್ರೀ ಮಹಾಂತ ಸ್ವಾಮೀಜಿ ಶಾಲಾ ಚುನಾವಣೆ ಸಂದರ್ಭ ಹಾಜರಿದ್ದು, ವಿಜೇತರಾದ ವಿದ್ಯಾರ್ಥಿಗಳು ಶುಭಹಾರೈಸಿದರು.









