
ಸೋಮವಾರಪೇಟೆ ಜು.4 NEWS DESK : ತಾಲ್ಲೂಕು ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆಯ ವಾರ್ಷಿಕ ಮಹಾಸಭೆಯು ಅಧ್ಯಕ್ಷೆ ಪೂರ್ಣಿಮಾ ಗೋಪಾಲ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.99.68 ರಷ್ಟು ಅಂಕ ಪಡೆದು ಜಿಲ್ಲೆಯಲ್ಲಿ ಟಾಫರ್ ಆಗಿದ್ದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಸಿ.ಎಸ್.ಆದ್ವಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.95 ರಷ್ಟು ಅಂಕ ಪಡೆದ ಕೆ.ಎಂ.ಸೃಷ್ಟಿ ಅವರುಗಳನ್ನು ಸನ್ಮಾನಿಸಲಾಯಿತು. ಅಲ್ಲದೆ ಬೆಂಗಳೂರು ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ಕರುನಾಡ ಪ್ರಭು ಕೆಂಪೆಗೌಡ ಪ್ರಶಸ್ತಿ ಪುರಸ್ಕøತ ಸೋಮವಾರಪೇಟೆ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಕರ್ನಾಟಕ ಒಕ್ಕಲಿಗರ ವಿಕಾಸ ವೇದಿಕೆಯವರು ನೀಡುವ ಶ್ರೀಮತಿ ಯಶೋಧರಮ್ಮ ದಾಸಪ್ಪ ಪ್ರಶಸ್ತಿ ಪುರಸ್ಕøತ ಹಾನಗಲ್ಲು ಗ್ರಾಮದ ಸಾಹಿತಿ ಜಲಕಾಳಪ್ಪ, ಕೃಷಿ ಕ್ಷೇತ್ರದ ಸಾಧನೆಗಾಗಿ ಪ್ರಶಸ್ತಿ ಗಳಿಸಿದ ನಿರ್ಮಲ ಪ್ರಕಾಶ್ ಹಾಗೂ ಕಾಫಿ ರುಚಿ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆದ ತಲ್ತಾರೆಶೆಟ್ಟಳ್ಳಿ ಗ್ರಾಮದ ಸಂಧ್ಯಾ ಕೃಷ್ಣಪ್ಪ ಅವರುಗಳನ್ನು ಸಭೆಯಲ್ಲಿ ಗೌರವಿಸಲಾಯಿತು. ಸಭೆಯಲ್ಲಿ ಕಾರ್ಯದರ್ಶಿ ಆಶಾ ಯೋಗೇಂದ್ರ, ಉಪಾಧ್ಯಕ್ಷೆ ಹರಿಣಿ ಕುಶಾಲಪ್ಪ, ಖಜಾಂಚಿ ತನ್ಮಯಿ ಪ್ರವೀಣ್, ಶಾಲಾ ಭಾತ್ಮೀದಾರರಾದ ಚಂದ್ರಿಕಾ ಕುಮಾರ್ ಇದ್ದರು.









