
ಮಡಿಕೇರಿ ಜು.7 NEWS DESK : ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಯ ಹಿನ್ನೆಲೆಯಲ್ಲಿ ಕೂಡ್ಲೂರು ಗ್ರಾಮದಲ್ಲಿ ಕೊಟ್ಟಿಗೆಯೊಂದರ ಚಾವಣಿಯ ಶೀಟ್‍ಗಳು ಮುರಿದು ಬಿದ್ದು ಹಾನಿಯುಂಟಾಗಿರುವ ಘಟನೆ ನಡೆದಿದೆ. ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯ್ತಿಯ ಕೂಡ್ಲೂರು ಗ್ರಾಮದ ನಿವಾಸಿಯಾದ ಲೋಕೇಶ್‍ಎಂಬವವರ ಮನೆಗೆ ಹೊಂದಿಕೊಂಡಂತೆ ಇರುವ ಕೊಟ್ಟಿಗೆಗೆ ಹಾನಿ ಸಂಭವಿಸಿದೆ. ಜಿಲ್ಲಾ ಮಳೆ ವಿವರ-ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದೊಂದು ದಿನದ ಅವಧಿಯಲ್ಲಿ ಸರಾಸರಿ 30.97 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 51, ವಿರಾಜಪೇಟೆ 12, ಸೋಮವಾರಪೇಟೆ 44.45, ಪೊನ್ನಂಪೇಟೆ 35.82 ಮತ್ತು ಕುಶಾಲನಗರ ತಾಲ್ಲೂಕಿನಲ್ಲಿ ಸರಾಸರಿ 11.6 ಮಿ.ಮೀ. ಮಳೆ ದಾಖಲಾಗಿದೆ. ಹೋಬಳಿವಾರು ಮಳೆ ವಿವರ- ಮಡಿಕೇರಿ 34 ಮಿ.ಮೀ., ನಾಪೋಕ್ಲು 27, ಸಂಪಾಜೆ 57, ಭಾಗಮಂಡಲ 86, ವಿರಾಜಪೇಟೆ 14, ಅಮ್ಮತ್ತಿ 10, ಸೋಮವಾರಪೇಟೆ 31.4, ಶನಿವಾರಸಂತೆ 31, ಶಾಂತಳ್ಳಿ 92, ಕೊಡ್ಲಿಪೇಟೆ 23.4, ಪೊನ್ನಂಪೇಟೆ 25, ಹುದಿಕೇರಿ 53.3, ಶ್ರೀಮಂಗಲ 52, ಬಾಳೆಲೆ 13, ಕುಶಾಲನಗರ 8.2, ಸುಂಟಿಕೊಪ್ಪ 15 ಮಿ.ಮೀ. ಮಳೆಯಾಗಿದೆ.








