ನಾಪೋಕ್ಲು ಜು.12 NEWS DESK : ದೇಶ ಕಾಯೋಣ ಬನ್ನಿ ಎಂದು ವಿದ್ಯಾರ್ಥಿಗಳಿಗೆ ಯೋಧ ಎಂ.ಬಿ ಬೆಳ್ಳಿಯಪ್ಪ ಅವರು ಕರೆನೀಡಿದರು, ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಇದೇ ಸಂಸ್ಥೆಯಲ್ಲಿ ಐದು ವರ್ಷಗಳ ಕಾಲ ಅಧ್ಯಯನ ಮಾಡಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಬಿ.ಬೆಳ್ಳಿಯಪ್ಪ ಆಪರೇಷನ್ ಸಿಂಧೂರ್ ನಲ್ಲಿಯೂ ಕಾರ್ಯವನ್ನು ನಿರ್ವಹಿಸಿ, ತಮ್ಮ ಕಾರ್ಯದಕ್ಷತೆಯನ್ನು ಮೆರೆದಿದರು. ವಿದ್ಯಾರ್ಥಿಗಳಿಗೆ ತಮ್ಮ ಸೇನೆಯ ಅನುಭವವನ್ನು ಹಂಚಿಕೊಂಡು ಸೇನೆಗೆ ಸೇರುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳು ಉನ್ನತಿಯನ್ನು ಹೊಂದಬೇಕಾದರೆ ಕಾರ್ಯ ಸಾಧನೆಗೆ ಶಿಸ್ತು ಮತ್ತು ಪ್ರಾಮಾಣಿಕ ಪ್ರಯತ್ನ ಬೇಕು ಎಂದು ಕಿವಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ನ ಪ್ರಾಂಶುಪಾಲರಾದ ಡಿ.ಎಸ್.ರಾಮಕೃಷ್ಣ ವಹಿಸಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರದ ಸಿ.ಆರ್.ಲೋಕೇಶ್, ಉಪನ್ಯಾಸಕರು ಅಧ್ಯಾಪಕರು ಸಭೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಮುಫೀದಾ ಸ್ವಾಗತಿಸಿದರು. ರಾಹುಲ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಸ್ಪಂದನ್ ವಂದಿಸಿದರು.
ವರದಿ : ದುಗ್ಗಳ ಸದಾನಂದ










