Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಏ.12 ರಂದು ವಸತಿ ಶಾಲೆ ಸಾಮಾನ್ಯ ಪ್ರವೇಶ ಪರೀಕ್ಷೆ*
  • *ಏ.10 ರಂದು ತಲಕಾವೇರಿ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ*
  • *ಏ.8 ರಂದು ಲೋಕಾಯುಕ್ತರಿಂದ ದೂರು ಅರ್ಜಿ ಸ್ವೀಕಾರ*
  • *ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್‍ನಲ್ಲಿ ಕ್ರಿಯೇಟಿವ್ ಚಿಲಿಪಿಲಿ ಬೇಸಿಗೆ ಶಿಬಿರ ಉದ್ಘಾಟನೆ*
  • *ವಿರಾಜಪೇಟೆ : ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ಒದಗಿಸಲು ಸಿ.ಪಿ.ಐ.ಎಂ ಪಕ್ಷ ಆಗ್ರಹ
  • *ಗದ್ದೆಹಳ್ಳದಲ್ಲಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ : ಶಿಕ್ಷಕರನ್ನು ಗೌರವಿಸಲು ಪಿ.ಆರ್.ಸುನಿಲ್‍ಕುಮಾರ್ ಕರೆ*
  • *ಛಾಯಾಗ್ರಹಣದ ದರ ಶೇ.10ರಷ್ಟು ಹೆಚ್ಚಳ : ಡಿ.ಸಿ.ರವೀಂದ್ರ*
  • *ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಪ್ರಾರ್ಥನಾ ಕೂಟ : ವಿಶೇಷ ಬಲಿಪೂಜೆ*
  • *ಡಾ.ಬಿ.ಆರ್.ಅಂಬೇಡ್ಕರ್ ಬದುಕು ಮತ್ತು ಬರಹ ಕುರಿತು ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆ*
  • *ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ “ಸಂಘ” ಕ್ಷೇತ್ರದ ಮಾದರಿಯಲ್ಲೇ ಆದಿಮಸಂಜಾತ ಕೊಡವ ಸಮುದಾಯಕ್ಕೆ ಭಾರತದ ಸಂಸತ್ತು ಮತ್ತು ಕರ್ನಾಟಕ ವಿಧಾನಸಭೆ ಎರಡರಲ್ಲೂ ಪ್ರತ್ಯೇಕ ಪ್ರಾತಿನಿಧ್ಯವನ್ನು ನೀಡಲು ಆಗ್ರಹ : ಸಿಎನ್‌ಸಿಯಿಂದ ಸತ್ಯಾಗ್ರಹ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 6,589 ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ನೇಮಕಾತಿ*
ಇತ್ತೀಚಿನ ಸುದ್ದಿಗಳು ಉದ್ಯೋಗ ಭಾಗ್ಯ

*ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 6,589 ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ನೇಮಕಾತಿ*

ಆಗಷ್ಟ್ 11, 20254 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಆ.11 NEWS DESK : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್‍ಬಿಐ ಜೂನಿಯರ್ ಅಸೋಸಿಯೇಟ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಬ್ಯಾಂಕ್ ಗ್ರಾಹಕರ ಸಹಾಯ ಮತ್ತು ಮಾರಾಟ ವಿಭಾಗದಲ್ಲಿ ಒಟ್ಟು 6,589 ಹುದ್ದೆಗಳಿಗೆ ನೇಮಕ ನಡೆಯಲಿದೆ. ಇದರಲ್ಲಿ ಕರ್ನಾಟಕದಲ್ಲಿ 198 ಬ್ಯಾಕ್ಲ್ಯಾಗ್ ಹುದ್ದೆಗಳೂ ಸೇರಿದಂತೆ ಒಟ್ಟು 270 ಹುದ್ದೆಗಳಿಗೆ ನೇಮಕ ಮಾಡಿ ಕೊಳ್ಳಲಾಗುತ್ತದೆ. ಕಳೆದ ವರ್ಷ 13,735 ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಎಸ್‍ಬಿಐ ನೇಮಕಾತಿ ನಡೆಸಿತ್ತು. ಈ ವರ್ಷ ಅದರ ಅರ್ಥಕ್ಕೂ ಹೆಚ್ಚು ಹುದ್ದೆಗಳನ್ನು ಕಡಿತಗೊಳಿಸಲಾಗಿದೆ ಎಂಬುದನ್ನ ಮರೆಯದಿರಿ. ರಾಜ್ಯದ ಅಭ್ಯರ್ಥಿಗಳು ಕನ್ನಡದಲ್ಲಿಯೇ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ ಬರೆಯುವ ಅವಕಾಶ ಇದೆ. :: ರಾಜ್ಯದಲ್ಲಿ ಹುದ್ದೆಗಳ ಸಂಖ್ಯೆ ::  ಕರ್ನಾಟಕ-270 ಹುದ್ದೆಗಳು ( ಬ್ಯಾಕ ಲಾಗ್ ಹುದ್ದೆಗಳು 198) :: ಒಂದಿಷ್ಟು ಗಮನಿಸಿ ::  ಅಧಿಸೂಚನೆಯ ಪ್ರಕಾರ, ಒಬ್ಬ ಅಭ್ಯರ್ಥಿಯು ಒಂದು ರಾಜ್ಯಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದು. ನೇಮಕಗೊಂಡ ಅಭ್ಯರ್ಥಿಗಳಿಗೆ ಆರು ತಿಂಗಳ ಪ್ರೋಬೇಷನರಿ ಅವಧಿ ಇರುತ್ತದೆ. ಈ ವೇಳೆ ಬ್ಯಾಂಕ್ ನೀಡುವ ಇ-ಪಾಠಗಳನ್ನು ಪೂರ್ಣಗೊಳಿಸತಕ್ಕದ್ದು. ಇಲ್ಲದಿದ್ದಲ್ಲಿ ನಿರೀಕ್ಷಣಾ ಅವಧಿ ಮುಂದುವರೆಯಲಿದೆ. ಭಾಷಾ ಪರೀಕ್ಷೆಗೆ ಬ್ಯಾಂಕ್ ಸೂಚಿಸಿದ ಸ್ಥಳದಿಂದಲೇ ಹಾಜರಾಗತಕ್ಕದ್ದು. ಮೆರಿಟ್ ಪಟ್ಟಿಯನ್ನು ರಾಜ್ಯವಾರು, ವರ್ಗವಾರು ತಯಾರಿಸ ಲಾಗುತ್ತದೆ. ನೇಮಕ ಸಂಬಂಧ ಎಲ್ಲಾ ಮಾಹಿತಿಯನ್ನು ಎಸ್ ಬಿ ಐ ವೆಬ್ ಸೈಟ್ನಲ್ಲೇ ಪ್ರಕಟಿಸುತ್ತದೆ. ಈಗಾಗಲೇ ಎಸ್ಬಿಐ ಕ್ಲರಿಕಲ್ ಕೇಡರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವವರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಸ್ಥಳೀಯ ಭಾಷಾ ಪರೀಕ್ಷೆ ನಡೆಸುವಾಗ ನಾನ್ ವರ್ಬಲ್ ಅಬ್ಜೆಕ್ಟೀವ್-3 ಪ್ಯಾಸೇಜ್ ಗೆ 15 ಪ್ರಶ್ನೆ ಗಳು ಹಾಗೂ ಸಬ್‍ಜೆಕ್ಟಿವ್ 3 ಪ್ಯಾಸೇಜ್ ಗಳಿಗೆ 15 ಪ್ರಶ್ನೆ ಗಳಿದ್ದು ಒಟ್ಟಾರೆ 30 ಅಂಕಗಳ ಪ್ರಶ್ನೆಗಳು, ಮತ್ತು ವರ್ಬಲ್ ವಿಭಾಗದಲ್ಲಿ 20 ಅಂಕಗಳ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕು. ಅಭ್ಯರ್ಥಿಗಳಿಗೆ ಮುದ್ರಿತ ಪ್ರವೇಶಪತ್ರ ಕಳಿಸಲಾಗುವುದಿಲ್ಲ ಹಾಗಾಗಿ, ಬ್ಯಾಂಕ್ ವೆಬ್‍ಸೈಟ್‍ನಿಂದಲೇ ಪ್ರವೇಶಪತ್ರ ಡೌನ್ಲೋಡ್ ಮಾಡಿಕೊಳ್ಳಬೇಕು. :: ಪರೀಕ್ಷೆ ಯಾವಾಗ ನಡೆಯಲಿದೆ :: ಈ ವರ್ಷದ ಸೆಪ್ಟೆಂಬರ್ ಮತ್ತು ನವೆಂಬರ್‍ನಲ್ಲಿ ಕ್ರಮವಾಗಿ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. :: ಪರೀಕ್ಷಾ ಕೇಂದ್ರಗಳು ಎಲ್ಲೆಲ್ಲಿ :: ಬೆಂಗಳೂರು, ಬೆಳಗಾವಿ, ದಾವಣಗೆರೆ, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಉಡುಪಿ. :: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :: ಆಗಸ್ಟ್ 26.2025. :: ಶೈಕ್ಷಣಿಕ ಅರ್ಹತೆಗಳೇನು :: ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ದಿಂದ ಪದವಿ ಹೊಂದಿರಬೇಕು. ಇದಲ್ಲದೆ, ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ಸಹ ಈ ನೇಮಕಾತಿಗೆ ಅರ್ಜಿ ಸಲ್ಲಿಸ ಬಹುದು. ಅದರೆ ಡಿಸೆಂಬರ್ 31,2025 ರೊಳಗಾಗಿ ಉತ್ತೀರ್ಣರಾಗಿರಬೇಕು. :: ವಯೋಮಿತಿ ಎಷ್ಟು….? :: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 20 ರಿಂದ 28 ವರ್ಷ ವಯಸ್ಸಿನವರಾಗಿರಬೇಕು. ಅಂದರೆ ಅಭ್ಯರ್ಥಿಗಳು 1997ರ ಏಪ್ರಿಲ್ 2 ಮತ್ತು 2005ರ ಏಪ್ರಿಲ್ 1ರ ನಡುವೆ ಜನಿಸಿರಬೇಕು, ಸರ್ಕಾರಿ ನಿಯಮಾನುಸಾರ, ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು. ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷದ ಸಡಿಲಿಕೆ ಮತ್ತು ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ನೀಡಲಾಗುತ್ತದೆ. :: ಅರ್ಜಿ ಶುಲ್ಕವೆಷ್ಟು…? :: ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಆದರೆ ಎಸ್ಸಿ, ಎಸ್ಟಿ ಮತ್ತು ವಿಶೇಷ ಚೇತನ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ಪಾವತಿಸುವುದರಿಂದ ವಿನಾಯಿತಿ ನೀಡಿರುತ್ತಾರೆ. ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು. :: ಪರೀಕ್ಷಾ ಪೂರ್ವ ತರಬೇತಿ :: ಎಸ್ಸಿ/ಎಸ್ಟಿ/ ಒಬಿಸಿ/ವಿಶೇಷ ಚೇತನರು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಬ್ಯಾಂಕ್ ವತಿಯಿಂದ ಪರೀಕ್ಷಾ ಪೂರ್ವ ತರಬೇತಿ ನೀಡಲಾಗುತ್ತದೆ. ಆನ್ ಲೈನ್ ಮೂಲಕವೇ ತರಬೇತಿ ಕಾರ್ಯಕ್ರಮ ನಡೆಯುತ್ತದೆ. ಇದರ ಅಗತ್ಯವಿದ್ದರೆ ಅರ್ಜಿ ಭರ್ತಿ ಮಾಡುವಾಗಲೇ ಮಾಹಿತಿ ಸಲ್ಲಿಸಬೇಕು. :: ಆಯ್ಕೆ ಪ್ರಕ್ರಿಯೆ ಹೇಗೆ…? :: ಎಸ್‍ಬಿಐ ಕ್ಲರ್ಕ್ ಆಗಲು, ಅಭ್ಯರ್ಥಿಗಳು ಮೂರು ಹಂತದ ಆಯ್ಕೆ ಪ್ರಕ್ರಿಯೆಯ ಮೂಲಕ ಸಾಗಬೇಕಾಗುತ್ತದೆ. ಮೊದಲ ಹಂತದಲ್ಲಿ, ಪ್ರಾಥಮಿಕ ಪರೀಕ್ಷೆ ಇರುತ್ತದೆ, ಅದರಲ್ಲಿ ಉತ್ತೀರ್ಣರಾದ ನಂತರ ಅಭ್ಯರ್ಥಿಗಳು ಎರಡನೇ ಹಂತದಲ್ಲಿ ಮುಖ್ಯ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತದೆ. ನಂತರ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸ್ಥಳೀಯ ಭಾಷೆಯ ಪರೀಕ್ಷೆಯನ್ನು ನೀಡಬೇಕಾಗುತ್ತದೆ. ಆದಾಗ್ಯೂ, ಈ ಪರೀಕ್ಷೆಯು 10 ಅಥವಾ 12 ನೇ ಹಂತದಲ್ಲಿ ರಾಜ್ಯದ ಸ್ಥಳೀಯ ಭಾಷೆಯನ್ನು ಅಧ್ಯಯನ ಮಾಡದ ಅಭ್ಯರ್ಥಿಗಳಿಗೆ ಮಾತ್ರ ಇರುತ್ತದೆ. :: ಪರೀಕ್ಷೆ ಹೇಗಿರುತ್ತದೆ…? ಎಸ್‍ಬಿಐ ಕ್ಲರ್ಕ್ ಪೂರ್ವಭಾವಿ ಪರೀಕ್ಷೆಯು 1 ಗಂಟೆಯದ್ದಾಗಿದ್ದು, ಒಟ್ಟು 100 ವಸ್ತುನಿಷ್ಠ ಪ್ರಶ್ನೆಗಳನ್ನು 100 ಅಂಕಗಳಿಗೆ ಕೇಳಲಾಗುತ್ತದೆ. ಇದು ಸಂಖ್ಯಾತ್ಮಕ ಸಾಮಥ್ರ್ಯ,35 ಪ್ರಶ್ನೆಗಳು, ತಾರ್ಕಿಕ ಸಾಮಥ್ರ್ಯದ 35 ಪ್ರಶ್ನೆಗಳು, ಮತ್ತು ಇಂಗ್ಲಿಷ್ ಭಾಷೆಯ 30 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಆಯಾ ವರ್ಗಗಳಿಗೆ ಮೀಸಲಾಗಿರುವ ಹುದ್ದೆಗಳಿಗೆ ಅನುಗುಣವಾಗಿ 10 ಪಟ್ಟು ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಪರಿಗಣಿಸಲಾಗುತ್ತದೆ. ಮೂರು ಪರೀಕ್ಷೆಗೆ ಯಾವುದೇ ಕನಿಷ್ಠ ಅರ್ಹತಾ ಅಂಕಗಳನ್ನು ನಿಗದಿಪಡಿಸಲಾಗಿಲ್ಲ. ಹಾಗೂ ವಿಭಾಗವಾರು ಅಂಕಗಳನ್ನು ಕಾಯ್ದು ಕೊಳ್ಳಲಾಗುವುದಿಲ್ಲ. ಮುಖ್ಯ ಪರೀಕ್ಷೆಯು ಒಟ್ಟು 200 ಅಂಕಗಳಿಗೆ ಆಗಿರುತ್ತದೆ. ಇದರಲ್ಲಿ ಒಟ್ಟು 190 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪರೀಕ್ಷೆಯು 2 ಗಂಟೆ 40 ನಿಮಿಷಗಳಾಗಿರುತ್ತದೆ. ಇದರಲ್ಲಿ, ಸಾಮಾನ್ಯ ಹಾಗೂ ಹಣಕಾಸಿನ ಜ್ಞಾನಕ್ಕೆ ಸಂಬಂಧಿಸಿದ 50 ಪ್ರಶ್ನೆಗಳಿಗೆ 50 ಅಂಕಗಳಿರುತ್ತವೆ. ಜನರಲ್ ಇಂಗ್ಲಿಷ್ನ 40 ಪ್ರಶ್ನೆಗಳಿಗೆ 40 ಅಂಕ, ಕ್ವಾಂಟಿಟೇಟಿವ್ ಅಪ್ಟಿಟ್ಯೂಡ್ನ 50 ಪ್ರಶ್ನೆಗಳಿಗೆ 50 ಹಾಗೂ ರೀಸನಿಂಗ್ ಎಬಿಲಿಟಿ ಹಾಗೂ ಕಂಪ್ಯೂಟರ್ ಆಪ್ಟಿಟ್ಯೂಡ್ಗೆ ಸಂಬಂಧಿಸಿದ 50 ಪ್ರಶ್ನೆಗಳಿಗೆ 60 ಅಂಕಗಳಿರುತ್ತದೆ.ಅಭ್ಯರ್ಥಿಗಳು ಸರಾಸರಿ ಅಂಕಗಳಲ್ಲಿ ಕನಿಷ್ಠ ಶೇಕಡಾವಾರು ಅಂಕಗಳನ್ನು ಗಳಿಸಬೇಕಾಗುತದೆ (SC/ST/OBC/PwBD/XS/DXS ಅಭ್ಯರ್ಥಿಗಳಿಗೆ, ಅದರಲ್ಲಿ 5% ವಿನಾಯಿತಿ ಲಭ್ಯವಿದೆ).ಸರಾಸರಿ ಅಂಕಗಳಲ್ಲಿ ಕನಿಷ್ಠ ಅರ್ಹತಾ ಅಂಕಗಳನ್ನು ಬ್ಯಾಂಕ್ ನಿರ್ಧರಿಸುತ್ತದೆ. ವೈಯಕ್ತಿಕ ವಿಭಾಗಕ್ಕೆ ಯಾವುದೇ ಕನಿಷ್ಠ ಅರ್ಹತಾ ಅಂಕಗಳನ್ನು ನಿಗದಿಪಡಿಸಲಾಗಿಲ್ಲ.ವಿಭಾಗವಾರು ಅಂಕ ಗಳನ್ನು ಕಾಯ್ದು ಕೊಳ್ಳಲಾಗುವುದಿಲ್ಲ. ಪೂರ್ವ ಭಾವಿ ಮತ್ತು ಮುಖ್ಯ ಪರೀಕ್ಷೆ ಯಲ್ಲಿ ಪ್ರತಿ ತಪ್ಪು ಉತ್ತರಗಳಿಗೆ 1/4 ಅಂಕಗಳನ್ನು ಕಳೆಯಲಾಗುತ್ತದೆ. :: ವೇತನ ಎಷ್ಟಿರುತ್ತದೆ…?: 24,050-64,480 ರೂ. ವೇತನ ಶ್ರೇಣಿ :: ಆರಂಭಿಕ ಮೂಲ ವೇತನ 26,730 ರೂ (24,050ರೂ ಎರಡು ಮುಂಗಡ ವೇತನ ಹೆಚ್ಚಳ (ಪದವೀಧರರಿಗೆ ಅನುಮತಿಸಲಾಗಿದೆ) ನೀಡಲಾಗುತ್ತದೆ. ಮುಂಬೈನಂಥ ಮಹಾನಗರಗಳಲ್ಲಿ ಆರಂಭಿಕ ವೇತನವು ಡಿಎ ಹಾಗೂ ಇತರ ಭತ್ಯೆಗಳನ್ನು ಒಳಗೊಂಡು 46,000 ರೂ. ವರೆಗೆ ಇರಲಿದೆ. ಇತರ ಭತ್ಯೆಗಳಿಗೂ ಅರ್ಹರಾಗಿರುತ್ತಾರೆ. ಕಾಯ್ದಿರಿಸುವ ಪಟ್ಟಿ( ವ್ಹೈಟ್ ಲಿಸ್ಟ್): ಖಾಲಿ ಹುದ್ದೆಗಳ (ರಾಜ್ಯ-ವರ್ಗವಾರು) 50% ವರೆಗಿನ ವ್ಹೈಟ್ ಲಿಸ್ಟ್ ಪಟ್ಟಿ ತಯಾರಿಸಲಿದ್ದು. ಅಭ್ಯರ್ಥಿಗಳು ಅಭ್ಯರ್ಥಿಗಳು ಪ್ರಸ್ತುತ ಬ್ಯಾಚ್ಗೆ ಸೇರದಿದ್ದರೆ ಮತ್ತು ರಾಜೀನಾಮೆ ನೀಡಿದ್ದರೆ ಮಾತ್ರ ಈ ಪಟ್ಟಿಯಿಂದ ತ್ರೈಮಾಸಿಕ ಆಧಾರದ ಮೇಲೆ ಬಿಡುಗಡೆ ಮಾಡಲಾಗುವುದು. :: ಅಧಿಕೃತ ಜಾಲ ತಾಣ :: https://sbi.co.in/ :: ಅರ್ಜಿ ಸಲ್ಲಿಕೆಗೆ ಲಿಂಕ್: https://bank.sbi/web/careers/current-openings ಅಥವಾ https://www.sbi.co.in/web/careers/current-openings-Recruitment of Junior Associates 2025. ಸಹಾಯವಾಣಿ:022-22820427 ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಸಂಪೂರ್ಣ ಅಧಿಸೂಚನೆಯನ್ನು ಓದಿಕೊಂಡು ಮುಂದುವರೆಯಿರಿ.  

ಮಾಹಿತಿ : ಆರ್.ಕೆ.ಬಾಲಚಂದ್ರ. ಲೇಖಕರು, ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ಹಾಗೂ ಸಾಪ್ಟ್ ಸ್ಕಿಲ್ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು, ಬೆಂಗಳೂರು.

 

 

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಏ.12 ರಂದು ವಸತಿ ಶಾಲೆ ಸಾಮಾನ್ಯ ಪ್ರವೇಶ ಪರೀಕ್ಷೆ*

ಏಪ್ರಿಲ್ 2, 2026

*ಏ.10 ರಂದು ತಲಕಾವೇರಿ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ*

ಏಪ್ರಿಲ್ 2, 2026

*ಏ.8 ರಂದು ಲೋಕಾಯುಕ್ತರಿಂದ ದೂರು ಅರ್ಜಿ ಸ್ವೀಕಾರ*

ಏಪ್ರಿಲ್ 2, 2026

*ಏ.10 ರಂದು ತಲಕಾವೇರಿ ದೇವಾಲಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ*

ಏಪ್ರಿಲ್ 2, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಏ.2 NEWS DESK : ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿರುವ ಶ್ರೀ ತಲಕಾವೇರಿ ದೇವಾಲಯದಲ್ಲಿ ಶ್ರೀ ಉಚ್ಚಿಲ ನೀಲೇಶ್ವರ ಪದ್ಮನಾಭ…

*ಏ.8 ರಂದು ಲೋಕಾಯುಕ್ತರಿಂದ ದೂರು ಅರ್ಜಿ ಸ್ವೀಕಾರ*

ಏಪ್ರಿಲ್ 2, 2026

*ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್‍ನಲ್ಲಿ ಕ್ರಿಯೇಟಿವ್ ಚಿಲಿಪಿಲಿ ಬೇಸಿಗೆ ಶಿಬಿರ ಉದ್ಘಾಟನೆ*

ಏಪ್ರಿಲ್ 2, 2026

*ವಿರಾಜಪೇಟೆ : ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ಒದಗಿಸಲು ಸಿ.ಪಿ.ಐ.ಎಂ ಪಕ್ಷ ಆಗ್ರಹ

ಏಪ್ರಿಲ್ 2, 2026

*ಗದ್ದೆಹಳ್ಳದಲ್ಲಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ : ಶಿಕ್ಷಕರನ್ನು ಗೌರವಿಸಲು ಪಿ.ಆರ್.ಸುನಿಲ್‍ಕುಮಾರ್ ಕರೆ*

ಏಪ್ರಿಲ್ 2, 2026

*ಛಾಯಾಗ್ರಹಣದ ದರ ಶೇ.10ರಷ್ಟು ಹೆಚ್ಚಳ : ಡಿ.ಸಿ.ರವೀಂದ್ರ*

ಏಪ್ರಿಲ್ 2, 2026

*ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಪ್ರಾರ್ಥನಾ ಕೂಟ : ವಿಶೇಷ ಬಲಿಪೂಜೆ*

ಏಪ್ರಿಲ್ 2, 2026

*ಡಾ.ಬಿ.ಆರ್.ಅಂಬೇಡ್ಕರ್ ಬದುಕು ಮತ್ತು ಬರಹ ಕುರಿತು ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆ*

ಏಪ್ರಿಲ್ 2, 2026

*ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ “ಸಂಘ” ಕ್ಷೇತ್ರದ ಮಾದರಿಯಲ್ಲೇ ಆದಿಮಸಂಜಾತ ಕೊಡವ ಸಮುದಾಯಕ್ಕೆ ಭಾರತದ ಸಂಸತ್ತು ಮತ್ತು ಕರ್ನಾಟಕ ವಿಧಾನಸಭೆ ಎರಡರಲ್ಲೂ ಪ್ರತ್ಯೇಕ ಪ್ರಾತಿನಿಧ್ಯವನ್ನು ನೀಡಲು ಆಗ್ರಹ : ಸಿಎನ್‌ಸಿಯಿಂದ ಸತ್ಯಾಗ್ರಹ*

ಏಪ್ರಿಲ್ 2, 2026

*ನಾಪೋಕ್ಲುವಿನಲ್ಲಿ ಹಿಂದೂ ಜನಜಾಗೃತಿ ಜಾಥ*

ಏಪ್ರಿಲ್ 2, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.