ಮಡಿಕೇರಿ NEWS DESK ಆ.18 : ನಗರದ ತಾಳತ್ತಮನೆ ನಿವಾಸಿಯಾದ ರಾಬಿನ್ ಕೆ. ಜೆ ಅವರು ಸಂತ ಫಿಲೋಮಿನಾ ಕಾಲೇಜು (ಸ್ವಾಯುತ್ತ) ಮೈಸೂರಿನ ಸಹ ಪ್ರಾಧ್ಯಾಪಕರಾದ ಡಾ. ನೂರ್ ಮುಬಾಶಿರ್ ಅವರ ಮಾರ್ಗದರ್ಶನದಲ್ಲಿ “A Study on Suicide Ideation Among Adolescent Students of Kodagu District” (ಕೊಡಗು ಜಿಲ್ಲೆಯ ಹದಿಹರೆಯದ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆಯ ಆಲೋಚನೆಗಳ ಕುರಿತು ಅಧ್ಯಯನ) ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ ಆಂಗ್ಲ ಭಾಷೆಯಲ್ಲಿ ಮಹಾಪ್ರಬಂಧವನ್ನು ಸಮಾಜ ಕಾರ್ಯ ವಿಷಯದಲ್ಲಿ ಪಿಹೆಚ್.ಡಿ ಪದವಿಗಾಗಿ ಮೈಸೂರು ವಿಶ್ವವಿದ್ಯಾನಿಲಯದ ಪಿಹೆಚ್.ಡಿ ನಿಯಮಾವಳಿಯಡಿಯಲ್ಲಿ ಅಂಗಿಕರಿಸಲಾಗಿದೆ. ಇವರು ಸಂತ ಫಿಲೋಮಿನಾ ಕಾಲೇಜು (ಸ್ವಾಯುತ್ತ), ಮೈಸೂರು ಇಲ್ಲಿ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ, ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ದಿವಂಗತ. ಕೆ. ಎಂ. ಜೇಮ್ಸ್ (ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ) ಮತ್ತು ದಿವಂಗತ ಫಿಲೋಮಿನಾ ಜೇಮ್ಸ್ ಅವರ ಪುತ್ರ. ಇವರ ಅಣ್ಣ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತ್ನಿ ಸುಂಟಿಕೊಪ್ಪದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಒರ್ವ ಪುತ್ರನಿದ್ದಾನೆ.










