
ಸುಂಟಿಕೊಪ್ಪ ಆ.21 NEWS DESK : ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಕಬ್ ಮತ್ತು ಬುಲ್ ಬುಲ್ ಸೇವಾದಳದ ಇಬ್ಬರು ವಿದ್ಯಾರ್ಥಿಗಳಿಗೆ ಕೊಡಗು ಜಿಲ್ಲಾ ಉಸ್ತವಾರಿ ಸಚಿವರಾದ ಎನ್.ಎಸ್.ಬೋಸ್‍ರಾಜು ಅವರಿಂದ ರಾಜ್ಯ ಪುರಸ್ಕಾರ ನೀಡಲಾಯಿತು. ಕಬ್ ವಿಭಾಗದಲ್ಲಿ ವಿದ್ಯಾರ್ಥಿ ಎಸ್.ಜೆನೀಶ್ ಮತ್ತು ಬುಲ್‍ಬುಲ್ ವಿದ್ಯಾರ್ಥಿನಿ ನುಹಾ ಫಾತೀಮಾ ಅವರುಗಳು ರಾಜ್ಯ ಪುರಸ್ಕಾರಕ್ಕೆ ಆಯ್ಕೆಗೊಂಡಿದ್ದು, ಮಡಿಕೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಬೋಸ್‍ರಾಜು ಅವರು ರಾಜ್ಯ ಪುರಸ್ಕಾರ ಪ್ರಶಸ್ತಿ ನೀಡಿ ಅಬಿನಂಧಿಸಿದರು. ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿ ಜೊವಿಟಾ ವಾಸ್ ಅವರು ಶಿಕ್ಷಕಿ ಹಾಗೂ ತರಬೇತುದಾರೆ ಯಿವಾಬೆನ್ಸಿಸ್ ಮತ್ತು ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರಶಂಸಿಸಿ ಶುಭ ಹಾರೈಸಿದರು.









