ಮಡಿಕೇರಿ ಆ.21 NEWS DESK : ಮಡಿಕೇರಿ ನಗರದ ಸರಕಾರಿ ಪದವಿಪೂರ್ವ ಕಾಲೇಜ್ ನ ಸೇವಾದಳದ ಸದಸ್ಯರಿಗೆ ಮಡಿಕೇರಿ ರೋಟರಿ ವತಿಯಿಂದ ಉಚಿತ ಬಿಳಿ ಸಾಕ್ಸ್ ಮತ್ತು ಬಿಳಿ ಕ್ಯಾನ್ವಾಸ್ ಪಾದರಕ್ಷೆಗಳನ್ನು ನೀಡಲಾಯಿತು. ಸೇವಾದಳದ ಸಮವಸ್ತ್ರದ ಭಾಗವಾದ ಬಿಳಿ ಸಾಕ್ಸ್ ಮತ್ತು ಪಾದರಕ್ಷೆಗಳೊಂದಿಗೆ ಸ್ವಾತಂತ್ರ್ಯೋತ್ಸವದ ಕವಾಯತುವಿನಲ್ಲಿ ಭಾಗವಹಿದ ಸೇವಾದಳ ತಂಡ ದ್ವಿತೀಯ ಬಹುಮಾನ ಪಡೆದಿರುವುದಾಗಿ ಕಾಲೇಜ್ ನ ಪ್ರಾಂಶುಪಾಲರಾದ ಶಶಿಕಲಾ ರೋಟರಿ ಮಡಿಕೇರಿಗೆ ಧನ್ಯವಾದ ಅರ್ಪಿಸಿದರು. ರೋಟರಿ ಅಧ್ಯಕ್ಷೆ ರೋ.ಲಲಿತಾ ರಾಘವನ್, ಕಾರ್ಯದರ್ಶಿ ರೋ.ಬಿ.ಎಂ.ಸೋಮಣ್ಣ ರೋ.ಅನಂತ ಸುಬ್ಬರಾವ್ ಹಾಗೂ ರೋ.ಸುದಯ್ ನಾಣಯ್ಯ ಅವರು ಪಾದರಕ್ಷೆಯ ಪ್ರಾಯೋಜಕರಾಗಿದ್ದಾರೆ.











