ಬೆಂಗಳೂರು ಆ.21 NEWS DESK : ಕೊರಿಯಾದಲ್ಲಿ ನಡೆದ 20ನೇ ಏಷ್ಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ವೇಗವಾದ ಸ್ಕೇಟರ್ ಹಾಗೂ ಡಬಲ್ ಸಿಲ್ವರ್ ಪದಕ ವಿಜೇತರಾದ ಧನುಷ್ ಬಾಬು ಮತ್ತು ಸಿಲ್ವರ್ ಪದಕ ವಿಜೇತೆಯಾದ ಪೂರ್ವಿ ಮಠೆ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಧಾನಸೌಧದ ಕಚೇರಿಯಲ್ಲಿ ಅಭಿನಂದಿಸಿದರು. ವಿಧಾನ ಪರಿಷತ್ ಸದಸ್ಯರೂ, ರಾಜ್ಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಗೋವಿಂದರಾಜು ಅವರು ಉಪಸ್ಥಿತರಿದ್ದರು.










