ವಿರಾಜಪೇಟೆ ಆ.21 NEWS DESK : ಶ್ರೀ ಕಾವೇರಿ ಗಣೇಶೋತ್ಸವ ಸಮಿತಿ ಮೂರ್ನಾಡು ರಸ್ತೆ ವಿರಾಜಪೇಟೆ ಮತ್ತು ದಕ್ಷಿಣ ಕೊಡಗು ಲೇಖಕಿಯರು ಮತ್ತು ಕಲಾವಿದರ ವೇದಿಕೆ ವಿರಾಜಪೇಟೆ ತಾಲ್ಲೂಕು ವತಿಯಿಂದ ಸೆ.4 ರಂದು ಜಿಲ್ಲಾಮಟ್ಟದ ಭಗವದ್ಗೀತೆ ಶ್ಲೋಕ ಮತ್ತು ಭಾವಾರ್ಥ ಪಠಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕಾವೇರಿ ಗಣೇಶೊತ್ಸವ ವೇದಿಕೆಯಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಸಬ್ ಜೂನಿಯರ್ ವಿಭಾಗ 6 ರಿಂದ 11 ವರ್ಷ, ಜೂನಿಯರ್ ವಿಭಾಗ 12ರಿಂದ 16 ವರ್ಷ, ಸೀನಿಯರ್ ವಿಭಾಗ 17 ರಿಂದ 22 ವರ್ಷ ಸಾರ್ವಜನಿಕ ವಿಭಾಗ 23 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದು. ಸ್ಪರ್ಧಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆ.31 ಹೆಸರು ನೊಂದಾಯಿಸಲು ಕಡೆಯ ದಿನಾಂಕವಾಗಿದ್ದು, ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಾವಣೆಗಾಗಿ ಮೊಬೈಲ್ ಸಂಖ್ಯೆ ವಿಮಲ ದಶರಥ-9008613729, ರಜಿತಾ, ಕಾರ್ಯಪ್ಪ-9481771851 ಸಂಪರ್ಕಿಸಬಹುದಾಗಿದೆ.










