
ಮಡಿಕೇರಿ ಆ.23 NEWS DESK : ಜಮ್ಮಾಬಾಣೆ ಹಾಗೂ ಇತರ ಕಂದಾಯ ಸಮಸ್ಯೆಗಳ ಬಗ್ಗೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಚರ್ಚಿಸಿದರು. ಸದನದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ಶಾಸಕರು, ಜಮ್ಮಾಬಾಣೆ ಹಾಗೂ ಕಂದಾಯ ಸಮಸ್ಯೆ ಕೊಡಗಿನ ಜನತೆಯನ್ನು ಕಾಡುತ್ತಿರುವ ಗಂಭೀರ ಸಮಸ್ಯೆಯಾಗಿದ್ದು, ಇದರ ಇತ್ಯರ್ಥಕ್ಕಾಗಿ ಶೀಘ್ರ ಸದನ ಸಮಿತಿ ರಚನೆ ಮಾಡುವಂತೆ ಕೋರಿದರು.









