
ಮಡಿಕೇರಿ ಆ.23 NEWS DESK : ಗೌಳಿಬೀದಿಯ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಸ್ಪರ್ಧೆ ಸಂಭ್ರಮದಿಂದ ನಡೆಯಿತು. ಗೌಳಿ ಸಮುದಾಯದವರು ಅನಾದಿ ಕಾಲದಿಂದಲೂ ವಿಶೇಷವಾಗಿ ಆಚರಿಸಿಕೊಂಡು ಬರುತ್ತಿರುವಂತೆ ಶ್ರೀ ಕೃಷ್ಣ ಜನ್ಮಾಷ್ಟಾಮಿಯನ್ನು ಈ ವರ್ಷವೂ ದೇವಾಲಯ ಸಮಿತಿಯಿಂದ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸ್ಪರ್ಧೆಗೂ ಮುನ್ನ ದೇವಾಲಯದಲ್ಲಿ ಶ್ರೀ ಕೃಷ್ಣನಿಗೆ ವಿಶೇಷ ಪೂಜೆ, ಶ್ರೀ ರಾಮಾಂಜನೇಯ ಭಜನಾ ಮಂಡಳಿಯಿಂದ ಭಜನೆ ಹಾಗೂ ಕೀರ್ತನೆಗಳು ನಡೆಯಿತು. ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಿತು. ಯುವಕರು ನೀರಿನೇಟನ್ನು ಲೆಕ್ಕಿಸದೆ ವಾದ್ಯಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾ ಮೊಸರು ಕುಡಿಕೆ ಓಡೆಯುವಲ್ಲಿ ಯಶಸ್ವಿಯಾದರು. ಮೊಸರು ಕುಡಿಕೆ ಒಡೆಯುವ ಸ್ಪರ್ಧಿಗಳಾಗಿ ಎಂ.ವಿಜಯ್ ಹಾಗೂ ಸಂತೋಷ್ ಬಲರಾಮ್ ಭಾಗವಹಿಸಿದರು.









