


ಮಡಿಕೇರಿ ಆ.26 NEWS DESK : ಅಮ್ಮತಿಯಲ್ಲಿ ನಡೆದ ವಲಯ ಮಟ್ಟದ ಅಥ್ಲೆಟಿಕ್ಸ್ ಪಂದ್ಯಾವಳಿಯ ವಿವಿಧ ಆಟೋಟಗಳಲ್ಲಿ ವಿರಾಜಪೇಟೆ ಕಾವೇರಿ ಶಾಲೆಯ ಪ್ರೌಢವಿಭಾಗದ ವಿದ್ಯಾರ್ಥಿಗಳು ಸ್ಪರ್ಧಿಸಿ ಪದಕಗಳನ್ನು ಗೆದ್ದುಕೊಂಡಿದ್ದಾರೆ. 400 ಮೀಟರ್ ಓಟದ ಸ್ಪರ್ಧೆಯಲ್ಲಿ 9ನೇ ತರಗತಿಯ ಕರ್ನಂಡ ಕೃತಿಕಾ ಅಕ್ಕಮ ಚಿನ್ನದ ಪದಕ, 200 ಮೀಟರ್ ಓಟದ ಸ್ಪರ್ಧೆಯಲ್ಲಿ 9ನೇ ತರಗತಿ ಬೊವ್ವೆರಿಯಂಡ ಹನ್ಸಿಕ ಪೊನ್ನಪ್ಪ ಚಿನ್ನದ ಪದಕ, ಗುಂಡು ಎಸೆತ ಸ್ಪರ್ಧೆಯಲ್ಲಿ 10ನೇ ತರಗತಿ ವಿದ್ಯಾರ್ಥಿ ಮುಲ್ಲೆಂಗಡ ಪೂರ್ವಿಕ ಪೂವಮ್ಮ ಎಂ.ಜಿ ಚಿನ್ನದ ಪದಕ, 100 ಮೀಟರ್ ಓಟದ ಸ್ಪರ್ಧೆಯಲ್ಲಿ ಅಮ್ಮಂಡ ಸ್ಪೂರ್ತಿ ದೇಚಮ್ಮ ಬೆಳ್ಳಿ ಪದಕ, 400 ಮೀ ಓಟದ ಸ್ಪರ್ದೆಯಲ್ಲಿ 8 ನೇ ತರಗತಿ ಕರ್ನಂಡ ಶತಕ ಕಾವೇರಮ್ಮ ಬೆಳ್ಳಿ ಪದಕ, ಡಿಸ್ಕಸ್ ತ್ರೋ ಸ್ಪರ್ಧೆಯಲ್ಲಿ 10ನೇ ತರಗತಿ ವಿದ್ಯಾರ್ಥಿ ಹನಾ ಫಲಕ್ ಬೆಳ್ಳಿಪದಕ, 800ಮೀ ಓಟದ ಸ್ಪರ್ಧೆಯಲ್ಲಿ 8ನೇ ತರಗತಿ ಫಾತಿಮತ್ ಫಿಧಾ ಕಂಚಿನ ಪದಕ, 4100ಮೀ ರಿಲೇಯಲ್ಲಿ ಬೊವ್ವೆರಿಯಂಡ ಹನ್ಸಿಕಾ ಪೊನ್ನಪ್ಪ, ಅಮ್ಮೆಂಡ ಸ್ಪೂರ್ತಿ ದೇಚಮ್ಮ, ಕುಲ್ಲ ಚಂಡ ಭೂಮಿಕ ಬೋಜಮ್ಮ, ಕರ್ನಂಡ ಕೃತಿಕಾ ಅಕ್ಕಮ್ಮ ಸ್ಪರ್ದಿಸಿ ಚಿನ್ನದ ಪದಕ, 4400 ಮೀ ರಿಲೇ ಯಲ್ಲಿ ಕರ್ನಂಡ ಕೃತಿಕಾ ಅಕ್ಕಮ್ಮ, ಬೊವ್ವೆರಿಯಂಡ ಹನ್ಸಿಕಾ ಪೊನ್ನಪ್ಪ, ಅಮ್ಮೆಂಡ ಸ್ಪೂರ್ತಿ ದೇಚಮ್ಮ, ಕರ್ನಂಡ ಶತಕ ಕಾವೇರಮ್ಮ ಚಿನ್ನದ ಪದಕ ಗಳಿಸರುತ್ತಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಕಿಯರುಗಳಾದ ಮೋನಿಕಾ ಹಾಗೂ ಲಾವಣ್ಯ ಮಾರ್ಗದರ್ಶನವನ್ನು ನೀಡಿರುತ್ತಾರೆ. ಇವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿಯವರು, ಮುಖ್ಯ ಶಿಕ್ಷಕಿ, ಸಂಯೋಜಕಿ, ಬೋಧಕ ಬೋಧಕೇತರ ವೃಂದದವರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.








