

ಭಾಗಮಂಡಲ ಆ.26 NEWS DESK : ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದಲ್ಲಿ ವಾಲಿಬಾಲ್ ಪ್ರಥಮ, ಥ್ರೋಬಾಲ್ ಪ್ರಥಮ, ಕಬಡ್ಡಿ ಪ್ರಥಮ. ಬಾಲಕಿಯರ ವಿಭಾಗದಲ್ಲಿ ಕಬಡ್ಡಿ ಪ್ರಥಮ, ವಾಲಿಬಾಲ್ ಪ್ರಥಮ, ಥ್ರೋಬಾಲ್ ಪ್ರಥಮ, ಪ್ರಾಥಮಿಕ ವಿಭಾಗದ ಬಾಲಕರ ವಿಭಾಗದಲ್ಲಿ ವಾಲಿಬಾಲ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ಕಬಡ್ಡಿ ಪ್ರಥಮ, ಥ್ರೋಬಾಲ್ ಪ್ರಥಮ ಸ್ಥಾನ ಪಡೆದಿದ್ದಾರೆ. ಪ್ರೌಢಶಾಲಾ ಅಥೇಟಿಕ್ಸ್ ವಿಭಾಗದಲ್ಲಿ ಧನ್ಯ 3000 ಮೀಟರ್, ಹೈಜಂಪ್, ಲಾಂಗ್ ಜಂಪ್‍ನಲ್ಲಿ ಪ್ರಥಮ. ವರ್ಷಿಣಿ 100 ಮೀ ಪ್ರಥಮ, 200ಮೀ ಪ್ರಥಮ, ತ್ರಿಪಲ್ ಜಂಪ್ ದ್ವಿತೀಯ. ವರ್ಷ 400 ಮೀ ಪ್ರಥಮ, ಡಯಾನಾ ಶಾಟ್ ಪುಟ್ ತೃತಿಯ, ತಟ್ಟೆ ಎಸೆತ ಪ್ರಥಮ, ಸನಿತಾ ಜಾವೇಲಿನ ಥ್ರೋ ಪ್ರಥಮ, ಸುಕನ್ಯಾ 1,500 ಪ್ರಥಮ, ತ್ರಿಪಲ್ ಜಂಪ್ ತೃತಿಯ, ರಿಲೇ 4*400 ಪ್ರಥಮ, 4*100 ಪ್ರಥಮ ಸ್ಥಾನ ಗೆದ್ದುಕೊಂಡಿದ್ದಾರೆ. ಬಾಲಕರ ವಿಭಾಗದಲ್ಲಿ ಧ್ಯಾನ್ 1,500 ಮೀ ಪ್ರಥಮ, ಹೈಜಂಪ್ ದ್ವಿತೀಯ, ಹರ್ ಡಲ್ಸ್ ಪ್ರಥಮ, ಪವನ್ ಪೊನ್ನಣ್ಣ ತ್ರಿಪಲ್ ಜಂಪ್ ಪ್ರಥಮ, 1500 ಮೀಟರ್ ದ್ವಿತೀಯ. ಶಶಾಂಕ್ ತಟ್ಟೆ ಎಸೆತ ದ್ವಿತೀಯ, ಶಾಟ್ ಪುಟ್ ದ್ವಿತೀಯ, 400ಮೀ ತೃತಿಯ. ದೇವೇಂದ್ರ 200 ಮೀಟರ್ ತೃತಿಯ. ಸಮರ್ಥ್ 3000ಮೀಟರ್ ದ್ವಿತೀಯ. ಮಧು 3000ಮೀಟರ್ ತೃತಿಯ. ಚಿರಾಗ್ 800ಮೀಟರ್ ತೃತಿಯ. ಹೃತಿಕ್ ರೋಹನ್ ಲಾಂಗ್ ಜಂಪ್ ದ್ವಿತೀಯ, ಜಾವೇಲಿನ್ ಥ್ರೋ ತೃತಿಯ, ರಿಲೇ 4*100 ದ್ವಿತೀಯ, 4*400 ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಂಶುಪಾಲರಾದ ಲೋಕೇಶ್, ನಿಲಯ ಪಾಲಕರಾದ ಕೆ.ಕೆ.ದೀಪಕ್, ದೈಹಿಕ ಶಿಕ್ಷಣ ಶಿಕ್ಷಕರಾದ ಕೆ.ಪಿ.ಪವನ್ ಸಾಗರ್, ತಂಡದ ವ್ಯವಸ್ಥಾಪಕರಾದ ಕೆ.ಜಿ.ಚೇತನ್ ಮತ್ತು ಬೋಧಕ, ಭೋದಕೇತರ ಸಿಬ್ಬಂದಿಗಳು, ಪೋಷಕರು ಶ್ಲಾಘನೆ ವ್ಯಕ್ತಪಡಿಸಿ, ಶುಭಹಾರೈಸಿದರು.









