
ಮಡಿಕೇರಿ ಆ.26 NEWS DESK : ಚೇನಂಡ ಕುಟುಂಬದ ಸಾರಥ್ಯದಲ್ಲಿ 2026ರ ಕೊಡವ ಕೌಟುಂಬಿಕ ಹಾಕಿ ಉತ್ಸವದ ಕರಪತ್ರವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಶಾಸಕರು, ಕೌಟುಂಬಿಕ ಹಾಕಿ ಪಂದ್ಯಾವಳಿಗಳು ಕೇವಲ ಕ್ರೀಡೆ ಮಾತ್ರವಲ್ಲದೆ ಪ್ರತಿಷ್ಠೆಯ ಸಂಕೇತ ಕೂಡ ಆಗಿದೆ. ಕೊಡಗು ಜಿಲ್ಲೆಯು ಅಂತರಾಷ್ಟ್ರೀಯ ಮಟ್ಟದ ಹಾಕಿ ಪಟುಗಳ ತವರೂರಾಗಿದ್ದು, ಈ ಹಾಕಿ ಪಂದ್ಯಾವಳಿ ಕೂಡ ಯಶಸ್ಸಿನ ಹಾದಿ ತುಳಿಯಲಿ ಹಾಗೂ ಅನೇಕ ಯುವ ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಗುವಂತಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್ ರಾಜ್, ಚೇನಂಡ ಕುಟುಂಬದ ಅಧ್ಯಕ್ಷರಾದ ಕಂಬನಿ ಕರುಂಬಯ್ಯ, ಕುಟುಂಬದ ಸದಸ್ಯರು, ಸಂಪನ್ ಅಯ್ಯಪ್ಪ, ವಿನೋದ್, ಪೊನಂಪೇಟೆ ತಹಸೀಲ್ದಾರ್ ಮೋಹನ್, ವಿರಾಜಪೇಟೆ ತಹಸೀಲ್ದಾರ್ ಪ್ರವೀಣ್ ಹಾಗೂ ಚೇನಂಡ ಕುಟುಂಬದ ಪಟ್ಟಿದಾರರು ಹಾಗೂ ಪ್ರಮುಖರು, ಹಾಕಿ ಪಂದ್ಯಾವಳಿಯ ಸಮಿತಿಯವರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.








