
ಕುಶಾಲನಗರ ಆ.28 NEWS DESK : ಕೂಡುಮಂಗಳೂರು ಗ್ರಾ.ಪಂ ಸುಂದರನಗರದಲ್ಲಿ ವಿನಾಯಕ ಯುವಕರ ಸಂಘದ ವತಿಯಿಂದ 31ನೇ ವರ್ಷದ ಅದ್ದೂರಿ ಗಣೇಶೋತ್ಸವವನ್ನು ಆಚರಿಸಲಾಯಿತು. ಮುಂಜಾನೆಯಿಂದಲೇ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಗಣೇಶನನ್ನು ಪ್ರತಿಷ್ಠಾಪಿಸಲಾಯಿತು. ಗಣಪತಿ ಮಂಟಪವನ್ನು ವಿದ್ಯುತ್ ಅಲಂಕೃತಗಳಿಂದ ಸಿಂಗರಿಸಲಾಯಿತು. ಮೂರು ದಿನಗಳ ಕಾಲ ವಿನಾಯಕನಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದು, ನಂತರ ಅದ್ದೂರಿ ಮೆರವಣಿಗೆ ಸಾಗಿ ಗಣೇಶನನ್ನು ವಿಸರ್ಜಿಸಲಾಗುವುದು. ಭಕ್ತಾಧಿಕಾರಿಗಳಿಗೆ ಅನ್ನದಾನವನ್ನು ಏರ್ಪಡಿಸಲಾಗಿದೆ ಎಂದು ವಿನಾಯಕ ಯುವಕರ ಸಂಘದವರು ತಿಳಿಸಿದ್ದಾರೆ. ಪ್ರತಿ ವರ್ಷ ಶಾಮಿಯಾನ ಹಾಕಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಈ ಬಾರಿ ಗಣಪತಿ ಪ್ರತಿಷ್ಠಾಪನೆಗೆ ಶಾಶ್ವತವಾದ ಕಟ್ಟಡ ನಿರ್ಮಿಸಬೇಕು ಎಂಬ ಉದ್ದೇಶದಿಂದ ಶೆಡ್ ನಿರ್ಮಿಸಲಾಗಿದೆ. ಎಲ್ಲರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಕಟ್ಟಡವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಕೆಲಸಕ್ಕೆ ಸಂಘ ಮುಂದಾಗಲಿದೆ. ಇದಕ್ಕೆ ಸಹಕರಿಸಿದ ಗಣಪತಿ ಸೇವಾ ಸಮಿತಿ, ಬಣ್ಣಾರಮ್ಮಾ ಸೇವಾ ಸಮಿತಿ, ಹನುಮ ಸೇವಾ ಸಮಿತಿ, ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಗ್ರಾ.ಪಂ ಸದಸ್ಯರಾದ ಆಶಾ ವೆಂಕಟೇಶ್, ದೀಪಾ ಹಾಗೂ ಕೆ.ಬಿ.ಶಂಶುದ್ಧೀನ್, ಗ್ರಾಮಸ್ಥರು ಹಾಗೂ ಸರ್ವ ದಾನಿಗಳಿಗೆ ವಿನಾಯಕ ಯುವಕರ ಸಂಘದವರು ಕೃತಜ್ಞತೆ ತಿಳಿಸಿದ್ದಾರೆ. ಈ ಸಂದರ್ಭ ಗಣಪತಿ ಸೇವಾ ಸಮಿತಿ, ಬಣ್ಣಾರಮ್ಮಾ ಸೇವಾ ಸಮಿತಿ, ಹನುಮ ಸೇವಾ ಸಮಿತಿ, ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಹಾಗೂ ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಹಾಗೂ ಗ್ರಾಮಸ್ಥರು ಇದ್ದರು.











