ನಾಪೋಕ್ಲು ಆ.30 NEWS DESK : ರನ್ನಿಂಗ್ ಇವೆಂಟ್ (5 ಕಿ.ಮೀ. ಓಟ) ದಲ್ಲಿ ಸ್ಪರ್ಧಿಸಿದ ನಾಪೋಕ್ಲು ಸರ್ಕಾರಿ ಪದವಿ ಕಾಲೇಜಿನ ತೃತೀಯ ಬಿಎ ವಿದ್ಯಾರ್ಥಿ ಎಸ್.ಗೌತಮ್ ಮೊದಲನೇ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. 2025-26ನೇ ಸಾಲಿನ ಯುವಜನೋತ್ಸವ ಎಚ್.ಐ.ವಿ ಏಡ್ಸ್ ಅರಿವು ಆಂದೋಲನ-ಕಾರ್ಯಕ್ರಮದ ಅಂಗವಾಗಿ ಮಡಿಕೇರಿಯಲ್ಲಿ ರೆಡ್ ರಿಬ್ಬನ್, ಹೆಲ್ತ್ ಡಿಪಾಟ್ರ್ಮೆಂಟ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅವರ ಸಂಯುಕ್ತ ಆಶ್ರಯದಲ್ಲಿ ನಡೆದ ಮ್ಯಾರಥಾನ್ ಸ್ಪರ್ಧೆಯಲ್ಲಿ ಎಸ್.ಗೌತಮ್‍ಗೆ ಗೌರವವಾಗಿ 5000 ನಗದು ಬಹುಮಾನ, ಪ್ರಮಾಣ ಪತ್ರ ಮತ್ತು ಪದಕ ಲಭಿಸಿದೆ. ತರಬೇತಿದಾರರಾಗಿ ವಿಕಾಸ್ ಶ್ರೀನಿವಾಸ್ ಕಾರ್ಯನಿರ್ವಹಿಸಿದ್ದು, ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ. ಗೌತಮ್ ಎಸ್. ವಿರಾಜಪೇಟೆ ನಿವಾಸಿ ಕೆ.ಶೇಖರ್ ಮತ್ತು ಎಸ್.ಶೋಭಾ ದಂಪತಿಗಳ ಪುತ್ರ.
ವರದಿ : ದುಗ್ಗಳ ಸದಾನಂದ.










