ಮಡಿಕೇರಿ ಆ.30 NEWS DESK : ಕೊಡಗು ಜಿಲ್ಲೆಯ ಮೀನುಗಾರಿಕೆ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಆಯ್ದ ಮೀನು ಮಾರಾಟಗಾರರಿಗೆ “ನಾಲ್ಕು ಚಕ್ರ ಮೀನು ಮಾರಾಟ ವಾಹನ ಖರೀದಿಗೆ” ಶೇ 50 ಅಥವಾ ಗರಿಷ್ಟ 3 ಲಕ್ಷಗಳ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಮತ್ತು ಅವಶ್ಯ ದಾಖಲಾತಿಯನ್ನು ಸೆ.10 ರ ಸಂಜೆ 05 ಗಂಟೆಯೊಳಗೆ ಸಂಬಂಧಪಟ್ಟ ತಾಲ್ಲೂಕು ಮಟ್ಟದ ಮೀನುಗಾರಿಕೆ ಕಚೇೀರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕುಶಾಲನಗರ, ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನವರು 8105367337 ಹಾಗೂ ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲ್ಲೂಕಿನವರು 9886717626 ಅಥವಾ ವೆಬೆಸೈಟ್ https://fisheries.karnataka.gov.in/fisheries-kodagu/public/kn ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಸಚಿನ್ ತಿಳಿಸಿದ್ದಾರೆ.










