ಮಡಿಕೇರಿ NEWS DESK ಆ.30 : ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದಲ್ಲಿ ನಡೆದ ಕೇರಳದ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೇರಳ ರಾಜ್ಯದ ಕೊಟ್ಟಾಯಂ ನಿವಾಸಿ ಮುರಳಿ(48) ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದು, ಬಸವಹಳ್ಳಿ ನಿವಾಸಿ ತೀರ್ಥ (25) ಎಂಬಾತನನ್ನು ಬಂಧಿಸಲಾಗಿದೆ. ಸ್ಥಳೀಯ ಕೃಷಿಕರೊಬ್ಬರ ಶುಂಠಿ ಕೃಷಿಯ ಮೇಲ್ವಿಚಾರಣೆ ಕೆಲಸಕ್ಕೆಂದು ನೇಮಿಸಲ್ಪಟ್ಟಿದ್ದ ಮುರಳಿ ಹಾಗೂ ತನ್ನ ಪತ್ನಿಯ ನಡುವಿನ ಸಂಬಂಧದ ಬಗ್ಗೆ ಸಂಶಯಗೊಂಡಿದ್ದ ತೀರ್ಥ ಮುರಳಿಯನ್ನು ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಶುಕ್ರವಾರ ರಾತ್ರಿ ತೀರ್ಥ ಪತ್ನಿಯ ಮೇಲೆ ಹಲ್ಲೆ ಮಾಡಿರುವುದಲ್ಲದೆ ದೊಣ್ಣೆಯಿಂದ ಮುರಳಿಯನ್ನು ಕೂಡ ಹಲ್ಲೆ ಮಾಡಿದ್ದಾನೆ. ಈ ಸಂದರ್ಭ ಮುರಳಿ ಸಾವನ್ನಪ್ಪಿರುವುದಾಗಿ ದೂರಲಾಗಿದೆ.
ಕುಶಾಲನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಕೊಲೆ ಆರೋಪದಡಿ ತೀರ್ಥನನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಭೇಟಿ ನೀಡಿದರು. ನಂತರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಕುರಿತು ವಿವರಿಸಿದರು. ತೀರ್ಥನ ಪತ್ನಿ ಜ್ಯೋತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.












