
ಮಡಿಕೇರಿ NEWS DESK ಸೆ.2 : ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಸಾಗಾಟ ಮತ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಭೇದಿಸಿರುವ ಕೊಡಗು ಜಿಲ್ಲಾ ಪೊಲೀಸರು, ಇಬ್ಬರು ಆರೋಪಿಗಳ ಸಹಿತ 2ಕೆ.ಜಿ 288 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ನಾಪೋಕ್ಲುವಿನ ಮರಂದೋಡ ಗ್ರಾಮದಲ್ಲಿ ಪ್ರಕರಣ ಪತ್ತೆಯಾಗಿದ್ದು, ಮೂಲತಃ ಅಸ್ಸಾಂ ರಾಜ್ಯದ ಧರೋಂಗ್ ಜಿಲ್ಲೆಯವರಾದ, ಪ್ರಸ್ತುತ ಕಬ್ಬಿನ ಕಾಡು-ಮರಂದೋಡ ಗ್ರಾಮದಲ್ಲಿರುವ ಅಮೀರ್ ಹುಸೈನ್(34) ಹಾಗೂ ಮುನಾವರ್ ಹುಸೈನ್(34) ಎಂಬುವವರೆ ಬಂಧಿತ ಆರೋಪಿಗಳು. ಖಚಿತ ಮಾಹಿತಿ ದೊರೆತ ಹಿನ್ನೆಲೆ ಜಿಲ್ಲಾ ಪೊಲೀಸರು ಮರಂದೋಡ ಗ್ರಾಮದ ಬಿದ್ದಂಡತಟ್ಟುವಿನಲ್ಲಿನ ಬಸ್ ನಿಲ್ದಾಣದ ಬಳಿ ದಾಳಿ ನಡೆಸಿ ಮಾಲು ಸಹಿತ ಆರೋಪಿಗಳನ್ನು ಬಂಧಿಸಿದರು. ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಸೂರಜ್ ಪಿ.ಎ., ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ನಾಪೋಕ್ಲು ಠಾಣಾ ಪಿಎಸ್ಐ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.










