
ಸುಂಟಿಕೊಪ್ಪ ಸೆ.3 NEWS DESK : ಬೋಯಿಕೇರಿಯಲ್ಲಿ ಸಿದ್ಧಿಬುದ್ಧಿ ವಿನಾಯಕ ದೇವಾಲಯದಲ್ಲಿ ಪ್ರಪ್ರತಿಷ್ಠಾಪಿಸಿದ್ದ ಗೌರಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಮುಂಜಾನೆಯಿಂದ ವಿಶೇಷ ಸಲ್ಲಿಸಿ, ನಂತರ ಬೋಯಿಕೇರಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ರಾತ್ರಿ ಸ್ಥಳೀಯ ಕೆರೆಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಗಣೇಶೋತ್ಸವದಲ್ಲಿ ಹಿಂದೂ, ಮುಸ್ಲಿಮರು ಪಾಲ್ಗೊಂಡು ಸಾಮರಸ್ಯ ಮೆರೆದರು. ಮೆರವಣಿಗೆಯು ಮುಖ್ಯ ಬೀದಿಯಲ್ಲಿ ಮುಸಲ್ಮಾನರು ಮಸೀದಿಯ ಮುಂಭಾಗ ಹಿಂದೂಗಳಿಗೆ ನೀರು, ಸಿಹಿತಿಂಡಿ, ಕೇಕ್ ಮತ್ತು ಬಾದಾಮಿ ಜ್ಯೂಸ್ ವಿತರಿಸಿದರು. ಈ ಸಂದರ್ಭ ಗಣೇಶ್, ಸ್ವಾಗತ್, ರಮೇಶ್, ರೆಹಮತ್ ಖಾನ್, ಸಮ್ಮದ್, ಜಲೀಲ್, ಸಿದ್ದೀಕ್, ಬಶೀರ್ ಸೇರಿದಂತೆ ದೇವಾಲಯ ಸಮಿತಿಯ ಪದಾಧಿಕಾರಿಗಳು ಇದ್ದರು.









