
ಸುಂಟಿಕೊಪ್ಪ ಸೆ.10 NEWS DESK : ನಾಕೂರು ಗ್ರಾಮದ ಸಂಜೀವಿನಿ ಒಕ್ಕೂಟದ ಸ್ವ ಸಹಾಯ ಸಂಘದ ವತಿಯಿಂದ
ನಿವೃತ್ತಗೊಂಡ ಆಶಾ ಕಾರ್ಯಕರ್ತೆ ಬಿ.ಎಸ್.ಶಿವಮ್ಮ ಅವರಿಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು. ಕಳೆದ 16 ವರ್ಷಗಳಿಂದ ನಾಕೂರು-ಶಿರಂಗಾಲ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯಾಗಿ ಅತ್ಯುತ್ತಮ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಿ.ಎಸ್.ಶಿವಮ್ಮ ಅವರಿಗೆ ಸಂಜೀವಿನಿ ಒಕ್ಕೂಟದ ಬೆಳಕು ಮತ್ತು ಸಮುದ್ರ ಸಂಘದ ಸದಸ್ಯರುಗಳು ಗ್ರಾಮದಲ್ಲಿ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಒಕ್ಕೂಟದ ಎಂ.ಬಿ.ಕೆ.ರಂಜಿನಿ, ಕೃಷಿಸಖಿ ಬ್ರಿಜಿತ್, ಸಂಘದ ಅಧ್ಯಕ್ಷರುಗಳಾದ ಎ.ಪಿ.ಮೀನಾಕ್ಷಿ, ಹೆಚ್.ಎ.ರಶ್ಮಿ, ಉಪಾಧ್ಯಕ್ಷರು ಹಾಗೂ ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು.








