

ಸುಂಟಿಕೊಪ್ಪ ಸೆ.10 NEWS DESK : 7ನೇ ಹೊಸಕೋಟೆಯ ಮಹಾಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾದ ಗೌರಿ-ಗಣೇಶ ಮೂರ್ತಿಯನ್ನು ವಿವಿಧ ಪೂಜಾ ವಿಧಿ ವಿಧಾನಗಳೊಂದಿಗೆ ವಿಸರ್ಜಿಸಲಾಯಿತು. ವಿದ್ಯುತ್ ದೀಪ ಅಲಂಕಾರ ಮಂಟಪದಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ನಗಾರಿ, ಹುಲಿ ವೇಷದೊಂದಿಗೆ ದೇವಾಲಯದಿಂದ ಹೊರಟ ಮೆರವಣಿಗೆಯೂ ಮೆಟ್ನಳ್ಳದವರೆಗೆ ಸಾಗಿ ಅಲ್ಲಿಂದ ವಾಪಾಸಾಗಿ ಅದೇ ಮಾರ್ಗವಾಗಿ ಏಳನೇ ಹೊಸಕೋಟೆಯ ಪ್ರಮುಖ ಬೀದಿಗಳಲ್ಲಿ ಭಕ್ತಾಧಿಗಳ ಪೂಜೆಯೊಂದಿಗೆ ಸಾಗಿ ನಂತರ 7ನೇ ಹೊಸಕೋಟೆ ಕೆರೆಯಲ್ಲಿ ವಿಸರ್ಜಿಸಲಾಯಿತು. ಈ ಸಂದರ್ಭ ದಾಸಂಡ ರಮೇಶ್ ಚಂಗಪ್ಪ, ರಮೇಶ್, ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಮತ್ತಿತರರು ಇದ್ದರು.








