
ಮಡಿಕೇರಿ ಸೆ.20 NEWS DESK : ಕುಶಾಲನಗರದ ಮಾದಪಟ್ಟಣದಲ್ಲಿ ಕೊಡಗಿನ ಮೊದಲ ಕಾರ್ಡಿಯಾಕ್ ಕ್ಯಾಥ್ ಲ್ಯಾಬ್ ಸೇವೆ ಒಳಗೊಂಡ ನೂತನ ಸೈರಸ್ ಆಸ್ಪತ್ರೆಯು ಸೆ.23 ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಮತ್ತು ಸೆನೆಟ್ ಸದಸ್ಯ ಡಾ.ಭರತ್ ಹಂಚೆ ತಿಳಿಸಿದರು. ನಗರದಲ್ಲಿ ಸುದ್ದಿಗೋಷಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ ಎಂದರು. ಸಮಾರಂಭದಲ್ಲಿ ಸಣ್ಣ ನೀರಾವರಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್ ಬೋಸರಾಜು, ಸಂಸದ ಯದುವೀರ್ ಒಡೆಯರ್, ಶಾಸಕರಾದ ಮಂತರ್ ಗೌಡ, ಎ.ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ ವೆಂಕಟರಾಜ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸತೀಶ್, ಕೆ.ಐ.ಓ.ಎಂ.ಎಸ್ ಡೀನ್ ಹಾಗೂ ನಿರ್ದೇಶಕರಾದ ಡಾ.ಎ.ಜೆ.ಲೋಕೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಕುಶಾಲನಗರ ಪಟ್ಟಣ ಪಾಲಿಕೆ ಅಧ್ಯಕ್ಷರಾದ ಜಯಲಕ್ಷ್ಮೀ ಚಂದ್ರು ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು. ಆಸ್ಪತ್ರೆಯಲ್ಲಿ ತುರ್ತು ವಿಭಾಗ, ಕಾರ್ಡಿಯೋಲಾಜಿ, ಮೂಳೆ ವೈದ್ಯರು ಹಾಗೂ ದೈಹಿಕ ತಜ್ಞರು, ಸಾಮಾನ್ಯ ಹಾಗೂ ಲ್ಯಾಪ್ರೋಸ್ಕೋಪಿ, ಶಸ್ತ್ರಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ, ಸಾಮಾನ್ಯ ವೈದ್ಯಕೀಯ, ಮಕ್ಕಳ ಹಾಗೂ ನವಜಾತ ಶಿಶು ಚಿಕಿತ್ಸಾ, ಕಿವಿ, ಮೂಗು, ಗಂಟಲು (ಇ.ಎನ್.ಟಿ). ಶ್ವಾಸಕೋಶ, ನರವಿಜ್ಞಾನ, ಚರ್ಮ ವಿಜ್ಞಾನ, ಕಿಡ್ನಿ ಚಿಕಿತ್ಸೆ, ಅಜೀರಣ ಶಸ್ತ್ರ ವೈದ್ಯಕೀಯ, ಮೂತ್ರ ವಿಜ್ಞಾನ, ಕಣ್ಣುಚಿಕಿತ್ಸೆ, ಅನೇಸ್ಥಟಿಸ್ಟ್, ಫಿಸಿಯೋಥೆರಪಿಸ್ಟ್ ವಿಭಾಗಗಳಿವೆ ಎಂದು ತಿಳಿಸಿದರು. ಅಲ್ಲದೇ ಕ್ಯಾಥ್ ಲ್ಯಾಬ್, ಸಿ ಟಿ ಸ್ಕ್ಯಾನ್, ಡಿಜಿಟಲ್ ಎಕ್ಸ್ ರೇ, ಫಾರ್ಮಸಿ, ಪ್ರಯೋಗಾಲಯ, ಐಸಿಯು/ ಸಿಸಿಯು/ಸಿಐಸಿಯು/ ಎನ್‍ಐಸಿಯು, ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಇಕೊ/ ಟಿಎಂಟಿ, ಲ್ಯಾಮಿನಾರ್ ಓಟಿ, ಇಸಿಜಿ, ಡಯಾಲಿಸಿಸ್ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು. ಆಸ್ಪತ್ರೆಯ ಉದ್ಘಾಟನೆಯ ನಂತರ ಸಾರ್ವಜನಿಕರು ಅಗತ್ಯ ಆರೋಗ್ಯ ಸೇವೆಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08276298777 ಸಂಪರ್ಕಿಸಬಹುದಾಗಿದೆ ಎಂದು ಡಾ.ಭರತ್ ಮಾಹಿತಿ ನೀಡಿದರು. ಸುದ್ದಿಗೋಷ್ಟಿಯಲ್ಲಿ ಆಸ್ಪತ್ರೆಯ ಮುಖ್ಯಸ್ಥ ಡಾ.ಜ್ಹೆನುಲ್, ಸರ್ಜನ್ ಡಾ.ಜೆ.ಬಿ.ನಿತೇಶ್, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು ಡಾ.ಜಿ.ವಿ.ಸ್ವಸ್ಥಿಕಾ, ತಜ್ಞ ವೈದ್ಯೆ ಡಾ.ರಿಮ್ ಉಪಸ್ಥಿತರಿದ್ದರು.









