
ನಾಪೋಕ್ಲು ಅ.8 NEWS DESK : ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯ್ತಿಯ ವಿಶೇಷ ಸಾಧನೆ, ಕೆಲಸ ಕಾರ್ಯಗಳ ಮಾಹಿತಿಯನ್ನು ಒಳಗೊಂಡ ಮುನ್ನೋಟ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಪಂಚಾಯತಿ ಸಭಾಂಗಣದಲ್ಲಿ ಪಂಚಾಯತಿ ಅಧ್ಯಕ್ಷರಾದ ಬಿ.ಎಸ್.ಕುಶನ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಪಂಚಾಯತಿ ಚುನಾಯಿತ ಪ್ರತಿನಿಧಿಗಳ ಸಾಮಾನ್ಯ ಸಭೆಯಲ್ಲಿ ಮುನ್ನೋಟ ಪುಸ್ತಕ ಅನಾವರಣಗೊಳಿಸಲಾಯಿತು. ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ ಮಾತನಾಡಿ, ಕಳೆದ 2020-21 ರಿಂದ 2025-26ನೇ ಸಾಲಿನಲ್ಲಿ ಅತ್ಯುತ್ತಮ ಸಮಾಜಮುಖಿ ಕೆಲಸಗಳು ಉತ್ತಮವಾಗಿ ಕಾರ್ಯರೂಪಕ್ಕೆ ತರಳಾಗಿದೆ ಎಂದರು. ಈ ಬಾರಿಯ ಸದಸ್ಯರೆಲ್ಲರೂ ಒಗ್ಗಟಾಗಿ ಎಲ್ಲರು ಒಂದೇ ಮನಸ್ಸಿಂದ ನಿಸ್ವಾರ್ಥವಾಗಿ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಯಿತು ಎಂದು ಎಲ್ಲ ಪ್ರತಿನಿಧಿಗಳನ್ನು ಶ್ಲಾಘಿಸಿದರು. ಕೊಡಗಿನ ಪಂಚಾಯಿತಿಗಳಲ್ಲಿ ಇದೇ ಮೊದಲ ಬಾರಿಗೆ ಪಂಚಾಯಿತಿಯ ಐದು ವರ್ಷಗಳ ಸಾಧನೆ ಕಾರ್ಯವನ್ನು ಬರವಣಿಗೆಯ ರೂಪದಲ್ಲಿ ಪಾರದರ್ಶಕವಾಗಿ ಹಾಗೂ ಎಲ್ಲಾ ಸಮುದಾಯದ ಜನರಿಗೆ ಅನುಕೂಲವಾಗುವಂತೆ ಸಮಾಜಮುಖಿ ಕೆಲಸಗಳನ್ನು ಮಾಡಿ 22 ಪುಟಗಳ ಮುನ್ನೋಟ ಪುಸ್ತಕವನ್ನು ಸಾರ್ವಜನಿಕರಿಗೆ ಮುಂದಿನ ಗ್ರಾಮ ಸಭೆಯಲ್ಲಿ ವಿತರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಯಿತಿ ಉಪಾಧ್ಯಕ್ಷರಾದ ರೇಖಾ ಬಾಲು ಬಿ.ಎಸ್., ಸದಸ್ಯರಾದ ಮುಂಡಂಡ ವಿಜು ತಿಮ್ಮಯ್ಯ, ಅಪ್ಪಚಂಡ ಮೀನಾಕ್ಷಿ ದೇವಯ್ಯ, ಮುಡೇರ ಶರ್ಮಿಳಾ ಮನು, ಎಂ.ಎನ್.ಪುಷ್ಪ, ಮುಂಡಂಡ ಪವಿ ಸೋಮಣ್ಣ, ನಿಂಗಪ್ಪ ಹೆಚ್ ಏನ್, ಬಿ.ಎಸ್.ಕೃಷ್ಣಪ್ಪ, ಯಶ್ವಿನ್ ಪೊನ್ನಪ್ಪ, ರಾಜೇಶ್ ಹೆಚ್.ಎಸ್, ಪಾರೆಮಜುಲು ರೀತ ಸುದರ್ಶನ್, ಮುಕ್ಕಾಟಿರ ಸೌಮ್ಯ ಸತೀಶ್ ಮತ್ತು ಎಂ.ವೈ.ಲತಾ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.









