
ಶ್ರೀಮಂಗಲ ಅ.11 NEWS DESK : ‘ಕೊಡವ ತಕ್ಕ್ ಎಳ್ತ್‌ಕಾರಡ ಕೂಟ’ವು ತನ್ನ ವಿಶೇಷ ಕವಿಗೋಷ್ಠಿಗೆ ಆಹ್ವಾನಿಸಿದ ‘ಕನ್ಯಾರ್ ಕವನ’ ಬರೆದು ಕಳುಹಿಸಲು ನೀಡಿದ್ದ ಅವಧಿಯನ್ನು ವಿಸ್ತರಿಸಿದ್ದು, ಅ.15 ಕೊನೆ ದಿನವಾಗಿದೆ. ಯುವಜನಾಂಗಕ್ಕೆ ಕವನ ಬರೆಯುವ ಆಸಕ್ತಿ ಹೆಚ್ಚಿಸುವ ಹಾಗೂ ಎಲೆಮರೆ ಕಾಯಿಯಂತಿರುವ ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶದಿಂದ ಅವದಿಯನ್ನು ವಿಸ್ತರಿಸಲಾಗಿದೆ. ಕವಿಗಳು ಕೊಡವ ಕ್ಯಾಲೆಂಡರಿನ “ಕನ್ಯಾರ್” ತಿಂಗಳಿಗೆ (ಸೆಪ್ಟೆಂಬರ್ 16 ರಿಂದ ಅಕ್ಟೋಬರ್ 16 ರವರೆಗಿನ ಅವಧಿ) ಸಂಬಂಧಿಸಿದ ವಸ್ತು ವಿಶಯವನ್ನಾಧರಿಸಿ ಸ್ವಂತವಾಗಿ ರಚಿಸಿದ ಕವನವನ್ನು ವಾಚಿಸುವ ವಿನೂತನ ಗೋಷ್ಠಿಯನ್ನು ‘ಕೂಟ’ ನಡೆಸುತ್ತಿದ್ದು, ಕವಿಗಳು ಕನ್ಯಾರ್ ತಿಂಗಳಿನ ವಿಶೇಷತೆಯನ್ನಾಧರಿಸಿ ಬರೆದ ಕೊಡವ ಕವನವನ್ನು ಅ.15ರ ಒಳಗೆ ಕೊಡವ ತಕ್ಕ್ ಎಳ್ತ್‌ಕಾರಡ ಕೂಟದ ಕಛೇರಿಗೆ ತಲುಪಿಸಬಹುದು. ಅಥವಾ 9880584732, 9448326014, 9449998789 ಸಂಖ್ಯೆಗಳಿಗೆ ವಾಟ್ಸಾಪ್ ಮೂಲಕ ಕಳುಹಿಸಬಹುದು. ರಾಜ್ಯಮಟ್ಟದ ಈ ಕನ್ಯಾರ್ ಕವಿಗೋಷ್ಠಿಗೆ ಜಾತಿ, ಧರ್ಮದ ನಿರ್ಬಂಧವಿಲ್ಲದೆ ಕೊಡವ ಭಾಷೆಯಲ್ಲಿ ‘ಕನ್ಯಾರ್’ ತಿಂಗಳ ವಸ್ತು ವಿಷಯಗಳನ್ನಾಧರಿಸಿ ಬರೆದ ಕವನಗಳನ್ನು ವಾಚಿಸಲು ಅವಕಾಶ ನೀಡುವುದರೊಂದಿಗೆ ಕವನಗಳನ್ನು ಪುಸ್ತಕ ಮುದ್ರಿಸಿ ಪ್ರಕಟಿಸಲಾಗುವುದೆಂದು ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









