
ವಿರಾಜಪೇಟೆ ಅ.13 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ವಿರಾಜಪೇಟೆ ತಾಲ್ಲೂಕು, ಮೂರ್ನಾಡು ವಲಯದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಪಾರಣೆ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ಎ.ಬಿ.ಕಾರ್ಯಕ್ಷೇತ್ರದ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮಾಜಿ ಸೈನಿಕರು ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ವಿ.ಎಂ.ಸುಬ್ರಮಣಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯೋಜನೆ ಕಾರ್ಯಕ್ರಮಗಳು ಜನರ ಬೆಳವಣಿಗೆ ಹಾಗೂ ಸಮಾಜಮುಖಿ ಚಿಂತನೆಯಿಂದ ಕೂಡಿರುತ್ತದೆ. ಅಂತೆಯೇ ಹಿಂದಿನ ಕಾಲದಲ್ಲಿ ಊರಿನ ಜನರುಗಳನ್ನು ಒಗ್ಗೂಡಿಸಲು ಈ ಪೂಜಾ ಕಾರ್ಯಕ್ರಮಗಳನ್ನು ನಾವು ಮಾಡುತ್ತಿದ್ದು, ಪೂಜೆಗಳು ನಮ್ಮ ಮುಂದಿನ ಪೀಳಿಗೆಗೆ ಒಂದು ಮಾದರಿ ಎಂದು ತಿಳಿಸಿದರು. ವಿರಾಜಪೇಟೆ ತಾಲ್ಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪಿ.ಹರೀಶ್. ಮಾತನಾಡಿ ಯೋಜನೆಯಲ್ಲಿ ಹತ್ತು ಹಲವು ಜನಮಂಗಳ ಹಾಗೂ ಸಮಾಜಮುಖ ಕಾರ್ಯಗಳು ನಡೆಸಿದ್ದು, ಇವುಗಳಲ್ಲಿ ಜ್ಞಾನದೀಪ ಶಿಕ್ಷಕರ ಆಯ್ಕೆ, ಮಾಶಾಸನ, ಸುಜ್ಞಾನಿಧಿ ವೇತನ, ದೇವಸ್ಥಾನದ, ಹಿಂದು ರುದ್ರ ಭೂಮಿ ಜೀರ್ಣೋದ್ಧಾರ, ಊರಿನ ಕೆರೆಗಳ ಪುನರ್ ಚೇತನಕ್ಕೂ ಬೇಕಾಗುವ ಅನುದಾನವನ್ನು ಕ್ಷೇತ್ರದ ವತಿಯಿಂದ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ತಪ್ಪು ಮಾಹಿತಿಗಳು ಕಿವಿ ಕೊಡಬೇಡಿ ಎಂದು ತಿಳಿಸಿದರು. ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯರಾದ ಉಮಾ ಪ್ರಭು ಮಾತನಾಡಿ, ಸತ್ಯನಾರಾಯಣ ಪೂಜೆ ನಮ್ಮ ಸನಾತನ ಸಂಸ್ಕೃತಿಯಾಗಿದ್ದು, ಎಲ್ಲಾ ಸದಸ್ಯರು ಹಾಗೂ ಊರಿನ ಜನರು ಈ ಪೂಜೆಯಲ್ಲಿ ಪಾಲ್ಗೊಳ್ಳಬೇಕು ಹಾಗೂ ಯೋಜನೆಯ ಎಲ್ಲಾ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು. ಪಾರಣೆ ಪಂಚಾಯತ್ ಅಧ್ಯಕ್ಷರಾದ ಕಟ್ಟಿ ಕುಶಾಲಪ್ಪ ಮಾತನಾಡಿ, ತಾವು ಸಣ್ಣ ವಯಸ್ಸಿನಲ್ಲಿ ಇದ್ದ ಸಂದರ್ಭದಲ್ಲಿ ಪೂಜೆಯ ದೃಶ್ಯಗಳು ಹೇಗಿತ್ತು ಹಾಗೂ ಯೋಜನೆ ವತಿಯಿಂದ ಆಯೋಜಿಸಿದ್ದ ಪೂಜಾ ಕಾರ್ಯಕ್ರಮವು ಜನಗಳ ಒಗ್ಗೂಡುವಿಕೆಗೆ ಒಂದು ಮಾರ್ಗವಾಗಿದ್ದು. ಯೋಜನೆ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು. ಪೂಜಾ ಸಮಿತಿ ಅಧ್ಯಕ್ಷ ಬಿ.ಎಸ್ ಮೋಹನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ವೇದಪ್ರಸಾದ್, ಮಂಜು ಮಾಚಯ್ಯ, ಕಾದಿರ ನಿಶಾ ಪಳಂಗಪ್ಪ, ಬೊಳ್ಳಚೆಟ್ಟೀರ ಪ್ರಕಾಶ್ ಕಾಳಪ್ಪ, ಬಲ್ಯಟಂಡ ಕೌಶಿ, ವಲಯದ ಮೇಲ್ವಿಚಾರಕರಾದ ಪ್ರತಾಪ್ ದೇವಾಡಿಗ, ಕೃಷಿ ಮೇಲ್ವಿಚಾರಕರಾದ ವಸಂತ, ವಲಯದ ಎಲ್ಲಾ ಸೇವ ಪ್ರತಿನಿಧಿಗಳು, ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.









