ಮಡಿಕೇರಿ ಅ.18 NEWS DESK : ಸಮಾಜ ಕಲ್ಯಾಣ ಇಲಾಖಾ ವತಿಯಿಂದ ಸುಂಟಿಕೊಪ್ಪದಲ್ಲಿ ಹೊಸದಾಗಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಪ್ರಾರಂಭಿಸಲಾಗಿದ್ದು, ಈ ವಸತಿ ಶಾಲೆಗೆ 2025-26ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸಹ ಶಿಕ್ಷಣದಲ್ಲಿ 6ನೇ ತರಗತಿಗೆ ಪ್ರವೇಶಾತಿ ಕಲ್ಪಿಸಲಾಗಿರುತ್ತದೆ. ಈ ವಸತಿ ಶಾಲೆಗೆ 6ನೇ ತರಗತಿ ಪ್ರವೇಶಾತಿ ಬಯಸುವ ಆಸಕ್ತ ವಿದ್ಯಾರ್ಥಿಗಳು ಷಡಕ್ಷರಿ ಎಚ್.ಆರ್., ಪ್ರಾಂಶುಪಾಲರು, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಸುಂಟಿಕೊಪ್ಪ, ಕುಶಾಲನಗರ ತಾಲ್ಲೂಕು 9482359812 ಮತ್ತು ಆಸಿಫ್ ಪಿ.ಕೆ., ನಿಲಯಪಾಲರು, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಸುಂಟಿಕೊಪ್ಪ, ಕುಶಾಲನಗರ ತಾಲ್ಲೂಕು 9900873037 ನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್ ಅವರು ತಿಳಿಸಿದ್ದಾರೆ.










