
ಮಡಿಕೇರಿ ಅ.21 NEWS DESK : ಬೆಂಗಳೂರಿನ ಸತ್ಯ ಪ್ರಕಾಶ್ ಅವರು ರಚಿಸಿರುವ ಬ್ಲಾಕ್ ಚೈನ್ (BLOCK CHAIN) ಇಂಗ್ಲೀಷ್ ಕೃತಿ ಮಡಿಕೇರಿಯಲ್ಲಿ ಬಿಡುಗಡೆಗೊಂಡಿತು. ಕ್ಲಬ್ ಮಹೀಂದ್ರದಲ್ಲಿ ಜಿಲ್ಲೆಯ ಸರಕಾರಿ ಅಭಿಯೋಜಕ ಶ್ರೀಧರನ್ ನಾಯರ್ ಅವರು ಪುಸ್ತಕ ಬಿಡುಗಡೆಗೊಳಿಸಿ ಶುಭಹಾರೈಸಿದರು. ಈ ಸಂದರ್ಭ ಪತ್ರಿಕಾ ಭವನದ ಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್, ಹಿರಿಯ ವಕೀಲರಾದ ರಮೇಶ್ ಚಂದರ್ ನಂಬಿಯಾರ್, ಕೆ.ಎಂ.ರಾಜನ್ ಹಾಗೂ ಕೃತಿ ರಚನೆಕಾರ ಸತ್ಯ ಪ್ರಕಾಶ್ ಉಪಸ್ಥಿತರಿದ್ದರು. ಸತ್ಯ ಪ್ರಕಾಶ್ ಅವರು ಕೇರಳ ಉಚ್ಚನ್ಯಾಯಾಲಯದ ಹಿರಿಯ ವಕೀಲ ರಮೇಶ್ ಚಂದರ್ ನಂಬಿಯಾರ್ ಅವರ ಅಳಿಯ.











