Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ನಂದಿಬೆಟ್ಟದ ಗೇಟ್ ಬಂದ್! ಫೆಬ್ರವರಿ 14 ರಂದು ಪ್ರೇಮಿಗಳ ಪ್ರವೇಶಕ್ಕೆ ನಿರ್ಬಂಧ*
  • *ಸಂತೋಷವಾಗಿ ಹೊರಟವರು ಮಸಣ ಸೇರಿದರು! ಪೋಷಕರ ಆಸೆಗಳನ್ನು ಮಣ್ಣು ಮಾಡಿದ ಆ ಒಂದು ಕ್ಷಣದ ಅಚಾತುರ್ಯವೇನು?*
  • *ಚಿನ್ನಾಭರಣ ಪ್ರಿಯರಿಗೆ ಸುವರ್ಣಾವಕಾಶ : ಕುಶಾಲನಗರದ ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ಓಲ್ಡ್ ಗೋಲ್ಡ್ ಎಕ್ಸ್‌ ಚೇಂಜ್ ಮೇಳ’*
  • *ಡೊನಾಲ್ಡ್ ಟ್ರಂಪ್ ಮೆಚ್ಚಿದ ಆ ‘ಒಂದು’ ನಿರ್ಧಾರ ಯಾವುದು? ಭಾರತಕ್ಕೆ ಸಿಗಲಿದೆ ಅತಿದೊಡ್ಡ ಆರ್ಥಿಕ ಲಾಭ!*
  • *ಜಾಹ್ನವಿ ಕಂದುಲಾ ಜೀವಕ್ಕೆ ‘ಬೆಲೆ’ ಕಟ್ಟಿದ ಅಮೆರಿಕಾ! ಸಿಯಾಟಲ್ ನಗರದಿಂದ ಬರಲಿದೆಯೇ ₹262 ಕೋಟಿ ಪರಿಹಾರ?*
  • *ಬಿಸಾಡಿದ ಬಾಟಲಿಗಳಿಂದ ಮತ್ತೆ ಗ್ಲಾಸಿಗೆ? ದೆಹಲಿ ಸ್ಟೇಡಿಯಂ ಸಿಬ್ಬಂದಿಯ ಈ ಕರ್ಮಕಾಂಡ ನೋಡಿ ನೀವೂ ವಾಕರಿಕೆ ಮಾಡ್ಕೊತೀರಾ!*
  • *ಚಿನ್ನಸ್ವಾಮಿಯಲ್ಲಿ ಮತ್ತೆ ಮೊಳಗಲಿದೆ RCB.. RCB.. ಸದ್ದು! ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಹೇಗೆ? ಅಭಿಮಾನಿಗಳೇ ಈಗಲೇ ರೆಡಿಯಾಗಿ!*
  • *ಕರೆಂಟ್ ಬಿಲ್ ನೋಡಿ ಬೆಚ್ಚಿಬೀಳಬೇಡಿ! ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಗೆ ಕ್ಷಣಗಣನೆ; ಯಾರಿಗೆ ಎಷ್ಟು ಹೊರೆ?*
  • *ಶಾಲೆ ಪ್ರವಾಸಕ್ಕೆ ಟ್ರಕ್ ಬಳಕೆ: ಪೋಷಕರು ಫುಲ್ ಗರಂ! ಹೆಡ್‌ಮಾಸ್ಟರ್ ಅಮಾನತು ಹಿಂದಿನ ಅಸಲಿ ಕಥೆ ಇಲ್ಲಿದೆ*
  • *ಕೊಡಗಿಗೆ ಭೇಟಿ ನೀಡಿದ ಪೊಲೀಸ್ ಮಹಾ ನಿರೀಕ್ಷಕರು*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಸೋಮವಾರಪೇಟೆಯಲ್ಲಿ ಬೃಹತ್ ಪ್ರತಿಭಟನೆ : ಸಿ ಮತ್ತು ಡಿ ಭೂಮಿ ಸಮಸ್ಯೆ ಬಗೆಹರಿಸಲು ರೈತರ ಆಗ್ರಹ*
ಇತ್ತೀಚಿನ ಸುದ್ದಿಗಳು

*ಸೋಮವಾರಪೇಟೆಯಲ್ಲಿ ಬೃಹತ್ ಪ್ರತಿಭಟನೆ : ಸಿ ಮತ್ತು ಡಿ ಭೂಮಿ ಸಮಸ್ಯೆ ಬಗೆಹರಿಸಲು ರೈತರ ಆಗ್ರಹ*

November 3, 20252 Mins Read
Facebook WhatsApp Twitter Telegram Copy Link Threads Email LinkedIn Pinterest
oplus_0
Facebook Twitter WhatsApp Email Telegram Copy Link

ಸೋಮವಾರಪೇಟೆ ನ.3 NEWS DESK : ಸಿ ಆ್ಯಂಡ್ ಡಿ ಭೂಮಿ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿ ರೈತ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಾಫಿ ಬೆಳೆಗಾರರ ಸಂಘದ ಆಶ್ರಯದಲ್ಲಿ ಸೋಮವಾರ ಪಟ್ಟಣದ ಜೇಸಿ ವೇದಿಕೆಯಲ್ಲಿ ರೈತ ಜಾಗೃತಿ ಸಮಾವೇಶ ನಡೆಯಿತು. ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ರೈತರು, ಸರ್ಕಾರಗಳು ಪರವಾಗಿ ವರ್ತಿಸಬೇಕು. ರೈತರ ಆಸ್ತಿ ಸಮಸ್ಯೆಗಳನ್ನು ಕೂಡಲೆ ಬಗೆಹರಿಸುವಂತೆ ಆಗ್ರಹಿಸಿದರು. ನಂತರ ಜೇಸಿ ವೇದಿಕೆಯಲ್ಲಿ ನಡೆದ ಜಾಗೃತಿ ಸಭೆಯಲ್ಲಿ ರೈತ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ಮಾತನಾಡಿ. ಸಿ ಆ್ಯಂಡ್ ಡಿ ಹೆಸರಿನಲ್ಲಿ ರೈತರು ಹಲವು ದಶಕಗಳಿಂದ ಕೃಷಿಭೂಮಿಯನ್ನು ಅರಣ್ಯ ಇಲಾಖೆ ಕಸಿದುಕೊಳ್ಳಲು ಪ್ರಯತ್ನಿಸಿದರು ಉಗ್ರಹೋರಾಟವನ್ನು ರೂಪಿಸಲಾಗುವುದು ಎಂದು ಎಚ್ಚರಿಸಿದರು. ಕಳೆದ ಒಂದೂವರೆ ವರ್ಷಗಳಿಂದ ರೈತ ಹೋರಾಟ ಸಮಿತಿಯ ನೇತೃತ್ವದಲ್ಲಿ ಅನೇಕ ಹೋರಾಟಗಳನ್ನು ಮಾಡಲಾಗಿದೆ. ಸಮಸ್ಯೆಗಳ ಬಗ್ಗೆ ಶಾಸಕರು, ಸಂಸದರು, ಮುಖ್ಯಮಂತ್ರಿಗಳು, ಅರಣ್ಯ ಹಾಗೂ ಕಂದಾಯ ಇಲಾಖಾ ಸಚಿವರನ್ನೂ ಭೇಟಿ ಮಾಡಿ ಗಮನ ಸೆಳೆಯಲಾಗಿದೆ. ಆದರೆ ಅರಣ್ಯ ಇಲಾಖೆಯವರು ರೈತರ ಗಮನಕ್ಕೆ ತರದೆ ಸರ್ವೆ ಮಾಡುತ್ತ ರೈತರಲ್ಲಿ ಭಯ ಹುಟ್ಟಿಸುತ್ತಿದ್ದಾರೆ ಎಂದು ದೂರಿದರು. ಡಿಸೆಂಬರ್ ತಿಂಗಳಿನಿಂದ ನಿರಂತರ ಹೋರಾಟ ಪ್ರಾರಂಭಿಸಲಾಗುವುದು ಎಂದು ಎಚ್ಚರಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ಜಿಲ್ಲಾ ಪ್ರತಿನಿಧಿ ಮಂಜುಕಿರಣ್ ಮಾತನಾಡಿ, 2019ರಲ್ಲಿ ದೆಹಲಿಯಲ್ಲಿ ರೈತರ ಮರಣಶಾಸನ ಎಂದು ಕರೆಸಿಕೊಂಡಿದ್ದ ಮೂರು ಕಾಯಿದೆಗಳನ್ನು ವಿರೋಧಿಸಿ ವರ್ಷಗಳ ಕಾಲ ರೈತರು ಹೋರಾಟ ಮಾಡಿದರು. ಅಂದಿನ ಕೇಂದ್ರ ಸರ್ಕಾರ ಅನೇಕ ರೀತಿಯಲ್ಲಿ ರೈತರಿಗೆ ಹಿಂಸೆ ನೀಡಿತು. 700 ಮಂದಿ ರೈತ ಹೋರಾಟಗಾರರು ಪ್ರಾಣ ತ್ಯಾಗ ಮಾಡಿದರು. ರೈತರ ಹೋರಾಟಗಾರರನ್ನು ಭಯೋತ್ಪಾದಕರು, ಉಗ್ರಗಾಮಿಗಳ, ರೈತರೆ ಅಲ್ಲ ಎಂದು ದೂಷಿಸಲಾಯಿತು. ಮೂರು ವರ್ಷಗಳ ನಂತರ ಕಾಯಿದೆಗಳನ್ನು ಸರ್ಕಾರ ವಾಪಾಸ್ಸು ಪಡೆಯಿತು. ಬೆಂಗಳೂರಿನ ದೇವನಹಳ್ಳಿಯಲ್ಲಿ 1771 ಎಕ್ರೆ ಜಾಗವನ್ನು ಸರ್ಕಾರ ವಶಕ್ಕೆ ಪಡೆಯಲ್ಲಿ ತಂತ್ರ ಮಾಡಿತು, ಮೂರು ವರ್ಷಗಳ ಹೋರಾಟದ ಫಲವಾಗಿ ರೈತರ ಭೂಮಿ ರೈತರಿಗೆ ಸಿಕ್ಕಿತು. ಕೊಡಗಿನಲ್ಲಿ ಸಿ ಆ್ಯಂಡ್ ಡಿ ಭೂಮಿಯನ್ನು ರೈತರ ಪಡೆಯುವ ಹೋರಾಟ ಸ್ವಾಭಿಮಾನದ ಹೋರಾಟವಾಗಬೇಕು ಎಂದು ಹೇಳಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಸಿ ಮತ್ತು ಡಿ ಭೂಮಿ ಸಮಸ್ಯೆ ಕಠಿಣವಾಗಿದೆ. ಮಲೆನಾಡು ಭಾಗದ ಶಾಸಕರುಗಳು ರಾಜಕೀಯ ರಹಿತವಾಗಿ ಒಂದಾಗಬೇಕು. ಸರ್ಕಾರದ ಮೇಲೆ ಒತ್ತಡ ಹಾಕಿ ಬಲಿಷ್ಠ ಕಾನೂನು ತಜ್ಞರ ತಂಡವನ್ನು ಮಾಡಿಕೊಂಡು ಕಾನೂನು ಹೋರಾಟಕ್ಕೆ ಮುಂದಾಗಬೇಕು. ರೈತರ ಪರವಾಗಿ ಕೆಲಸ ಮಾಡುವುದು ಸರ್ಕಾರದ ಕರ್ತವ್ಯವಾಗಿದೆ. ರೈತಪರ ಪಾಲಿಸಿಯನ್ನು ರೂಪಿಸುವ ಅಗತ್ಯತೆ ಇದೆ ಎಂದು ಹೇಳಿದರು. ರಾಜ್ಯ ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ರೈತರ ಭೂಮಿ ರೈತರ ತಾಯಿ ಇದ್ದಹಾಗೆ, ಅದನ್ನು ಪ್ರಾಣ ಕೊಟ್ಟಾದರೂ ಉಳಿಸಿಕೊಳ್ಳಬೇಕು ಎಂದು ಹೇಳಿದರು. 140 ಕೋಟಿ ಜನರಿಗೆ ಅನ್ನಕೊಡುವ ರೈತರ ಕೃಷಿ ಭೂಮಿಯನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರೆ, ಸರ್ಕಾರ ಹಾಗು ಅದರ ಅಂಗ ಸಂಸ್ಥೆಗಳೇ ನಾಶವಾಗುತ್ತವೆ ಎಂದು ಆಕ್ರೋಶದ ಮಾತುಗಳನ್ನಾಡಿದರು. ರೈತದ್ರೋಹಿಗಳನ್ನು ರೈತರು ಯಾವತ್ತೂ ಕ್ಷಮಿಸಬಾರದು. ರೈತರು ತಮ್ಮ ಹಕ್ಕನ್ನು ಪ್ರತಿಪಾದಿಸದಿದ್ದರೆ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು. ಅಕ್ರಮ ಒತ್ತುವರಿ ಹೆಸರಿನಲ್ಲಿ ಮುಕ್ಕೋಡ್ಲು ಗ್ರಾಮದ ನಾಣಿಯಪ್ಪ ಅವರ ಕಾಫಿ ತೋಟವನ್ನು ನಾಶಗೊಳಿಸಿದ ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿ, ವೇದಿಕೆಯಲ್ಲಿ ನಾಣಿಯಪ್ಪ ಕುಟುಂಬಸ್ಥರು ತಮ್ಮ ಆಸ್ತಿ ದಾಖಲೆಯನ್ನು ಸುಟ್ಟು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ವೇದಿಕೆಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ.ಲವ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ಜಿಲ್ಲಾ ಉಪಾಧ್ಯಕ್ಷ ಜಿ.ಎಂ.ಹೂವಯ್ಯ, ರೈತ ಮುಖಂಡರಾದ ಕೆ.ಎಂ.ಲೋಕೇಶ್, ಬಿ.ಜೆ.ದೀಪಕ್, ಕೂತಿ ದಿವಾಕರ್ ಮತ್ತಿತರ ರೈತ ಮುಖಂಡರು ಇದ್ದರು.

 

 

 

Share. Facebook Twitter Pinterest LinkedIn Tumblr Email WhatsApp
Previous Article*ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯ ರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಕಾರ್ಯಕ್ರಮ*
Next Article *ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬೋಧನಾ ತರಬೇತಿ ಕಾರ್ಯಕ್ರಮ*

Website design development company services in Mangalore

Forex Trading Teacher in India

Related Posts

*ನಂದಿಬೆಟ್ಟದ ಗೇಟ್ ಬಂದ್! ಫೆಬ್ರವರಿ 14 ರಂದು ಪ್ರೇಮಿಗಳ ಪ್ರವೇಶಕ್ಕೆ ನಿರ್ಬಂಧ*

February 13, 2026

*ಸಂತೋಷವಾಗಿ ಹೊರಟವರು ಮಸಣ ಸೇರಿದರು! ಪೋಷಕರ ಆಸೆಗಳನ್ನು ಮಣ್ಣು ಮಾಡಿದ ಆ ಒಂದು ಕ್ಷಣದ ಅಚಾತುರ್ಯವೇನು?*

February 13, 2026

*ಚಿನ್ನಾಭರಣ ಪ್ರಿಯರಿಗೆ ಸುವರ್ಣಾವಕಾಶ : ಕುಶಾಲನಗರದ ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ಓಲ್ಡ್ ಗೋಲ್ಡ್ ಎಕ್ಸ್‌ ಚೇಂಜ್ ಮೇಳ’*

February 13, 2026

*ಸಂತೋಷವಾಗಿ ಹೊರಟವರು ಮಸಣ ಸೇರಿದರು! ಪೋಷಕರ ಆಸೆಗಳನ್ನು ಮಣ್ಣು ಮಾಡಿದ ಆ ಒಂದು ಕ್ಷಣದ ಅಚಾತುರ್ಯವೇನು?*

February 13, 2026

ಬೆಂಗಳೂರು ಗ್ರಾಮಾಂತರ: ಶುಕ್ರವಾರ ಬೆಳ್ಳಂಬೆಳಗ್ಗೆ ಹೊಸಕೋಟೆ ಬಳಿ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಆರು ಮಂದಿ ವಿದ್ಯಾರ್ಥಿಗಳು ಹಾಗೂ…

*ಚಿನ್ನಾಭರಣ ಪ್ರಿಯರಿಗೆ ಸುವರ್ಣಾವಕಾಶ : ಕುಶಾಲನಗರದ ಜಿ.ಎಲ್‌.ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ಓಲ್ಡ್ ಗೋಲ್ಡ್ ಎಕ್ಸ್‌ ಚೇಂಜ್ ಮೇಳ’*

February 13, 2026

*ಡೊನಾಲ್ಡ್ ಟ್ರಂಪ್ ಮೆಚ್ಚಿದ ಆ ‘ಒಂದು’ ನಿರ್ಧಾರ ಯಾವುದು? ಭಾರತಕ್ಕೆ ಸಿಗಲಿದೆ ಅತಿದೊಡ್ಡ ಆರ್ಥಿಕ ಲಾಭ!*

February 12, 2026

*ಜಾಹ್ನವಿ ಕಂದುಲಾ ಜೀವಕ್ಕೆ ‘ಬೆಲೆ’ ಕಟ್ಟಿದ ಅಮೆರಿಕಾ! ಸಿಯಾಟಲ್ ನಗರದಿಂದ ಬರಲಿದೆಯೇ ₹262 ಕೋಟಿ ಪರಿಹಾರ?*

February 12, 2026

*ಬಿಸಾಡಿದ ಬಾಟಲಿಗಳಿಂದ ಮತ್ತೆ ಗ್ಲಾಸಿಗೆ? ದೆಹಲಿ ಸ್ಟೇಡಿಯಂ ಸಿಬ್ಬಂದಿಯ ಈ ಕರ್ಮಕಾಂಡ ನೋಡಿ ನೀವೂ ವಾಕರಿಕೆ ಮಾಡ್ಕೊತೀರಾ!*

February 12, 2026

*ಚಿನ್ನಸ್ವಾಮಿಯಲ್ಲಿ ಮತ್ತೆ ಮೊಳಗಲಿದೆ RCB.. RCB.. ಸದ್ದು! ಸರ್ಕಾರದ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಹೇಗೆ? ಅಭಿಮಾನಿಗಳೇ ಈಗಲೇ ರೆಡಿಯಾಗಿ!*

February 12, 2026

*ಕರೆಂಟ್ ಬಿಲ್ ನೋಡಿ ಬೆಚ್ಚಿಬೀಳಬೇಡಿ! ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಗೆ ಕ್ಷಣಗಣನೆ; ಯಾರಿಗೆ ಎಷ್ಟು ಹೊರೆ?*

February 12, 2026

*ಶಾಲೆ ಪ್ರವಾಸಕ್ಕೆ ಟ್ರಕ್ ಬಳಕೆ: ಪೋಷಕರು ಫುಲ್ ಗರಂ! ಹೆಡ್‌ಮಾಸ್ಟರ್ ಅಮಾನತು ಹಿಂದಿನ ಅಸಲಿ ಕಥೆ ಇಲ್ಲಿದೆ*

February 12, 2026

*ಕೊಡಗಿಗೆ ಭೇಟಿ ನೀಡಿದ ಪೊಲೀಸ್ ಮಹಾ ನಿರೀಕ್ಷಕರು*

February 12, 2026

*ಕುಶಾಲನಗರದಲ್ಲಿ ಒಣ ಕಸ ಸಂಗ್ರಹ ಘಟಕ ಉದ್ಘಾಟನೆ*

February 12, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.