ಕುಶಾಲನಗರ NEWS DESK ನ. 9: ರಾಜ್ಯ ಚುನಾವಣಾ ಆಯೋಗದ ಪ್ರಕರಣಗಳಿಗೆ ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಹಾಜರಾಗಲು ಯಡವನಾಡು ಗ್ರಾಮದ ಕೆ.ಸಿ.ಪ್ರತೀಪ್ ಅವರನ್ನು ನಿಯೋಜಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಪ್ರತೀಪ್ ಅವರು ಯಡವನಾಡು ಗ್ರಾಮದ ಕೆ.ಪಿ.ಚಲುವೇಗೌಡ ಲಕ್ಷ್ಮಮ್ಮ ದಂಪತಿಗಳ ಪುತ್ರ. 2006 ರಿಂದ ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.










