Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಪ್ರತಿಭಾ ಕಾರಂಜಿ :ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಕಾವೇರಿ ಶಾಲೆ ವಿದ್ಯಾರ್ಥಿಗಳು*
  • ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?
  • *ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*
  • ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!
  • *ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*
  • *ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*
  • *ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*
  • *ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*
  • *ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*
  • *ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಭಾರತೀಯ ಏರೋಸ್ಪೇಸ್ ಮೆಡಿಸಿನ್ ಸೊಸೈಟಿ (ಐಎಸ್ಎಎಂ) ಯ 64ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿದ ಐಎಎಫ್ ಮುಖ್ಯಸ್ಥರು*
ಇತ್ತೀಚಿನ ಸುದ್ದಿಗಳು

*ಭಾರತೀಯ ಏರೋಸ್ಪೇಸ್ ಮೆಡಿಸಿನ್ ಸೊಸೈಟಿ (ಐಎಸ್ಎಎಂ) ಯ 64ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿದ ಐಎಎಫ್ ಮುಖ್ಯಸ್ಥರು*

November 21, 20252 Mins Read
Facebook WhatsApp Twitter Telegram Copy Link Threads Email LinkedIn Pinterest
Facebook Twitter WhatsApp Email Telegram Copy Link

ಬೆಂಗಳೂರು ನ.21 NEWS DESK :  ಇಂಡಿಯನ್ ಸೊಸೈಟಿ ಆಫ್ ಏರೋಸ್ಪೇಸ್ ಮೆಡಿಸಿನ್ (ಐಎಸ್ ಎಎಂ) ನ 64 ನೇ ವಾರ್ಷಿಕ ಸಮ್ಮೇಳನವು ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ (ಐಎಎಂ) ನಲ್ಲಿ 2025ರ ನವೆಂಬರ್ 20-21 ರಂದು ನಡೆಯಿತು. ದೇಶದ ನಾನಾ ಮೂಲೆಗಳಿಂದ ಮತ್ತು ವಿದೇಶಗಳಿಂದ ಆಗಮಿಸಿದ್ದ ಮಿಲಿಟರಿ ಮತ್ತು ನಾಗರಿಕ ಗಣ್ಯರ ಸಮಕ್ಷಮದಲ್ಲಿ ವಾಯುಪಡೆಯ ಮುಖ್ಯಸ್ಥ (ಸಿಎಎಸ್) ಏರ್ ಚೀಫ್ ಮಾರ್ಷಲ್ ಎ.ಪಿ.ಸಿಂಗ್ ಅವರು ಸಮ್ಮೇಳನವನ್ನು ಉದ್ಘಾಟಿಸಿದರು. ಸಮ್ಮೇಳನದ ಘೋಷವಾಕ್ಯ ‘ಏರೋಸ್ಪೇಸ್ ಔಷಧಗಳಲ್ಲಿ ನಾವೀನ್ಯತೆಗಳು: ಅನಂತ ಸಾಧ್ಯತೆಗಳು’ ಎಂಬುದಾಗಿದ್ದು, ಅದರಲ್ಲಿ ವಿಮಾನ ಚಾಲಕರ ಸುರಕ್ಷತೆ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯ ಅವಶ್ಯಕತೆಗಳನ್ನು ಸಮತೋಲನಗೊಳಿಸುವಲ್ಲಿ ಏರೋಸ್ಪೇಸ್ ಮೆಡಿಸಿನ್ ವೃತ್ತಿಪರರ ನವೀನ ವಿಧಾನಗಳನ್ನು ಬಿಂಬಿಸಲಾಯಿತು. ಸಮ್ಮೇಳನದಲ್ಲಿ ಸಶಸ್ತ್ರ ಪಡೆಗಳ ಪ್ರತಿನಿಧಿಗಳು, ಭಾರತೀಯ ವಾಯುಪಡೆ ಮತ್ತು ನಾಗರಿಕ ವಿಮಾನಯಾನದ ವಿಮಾನ ಸಿಬ್ಬಂದಿ ಮತ್ತು ಡಿಆರ್ ಡಿಒ, ಎಚ್ ಎಎಲ್ ಮತ್ತು ಇಸ್ರೋದ ವಿಜ್ಞಾನಿಗಳು ಭಾಗವಹಿಸಿದ್ದರು. ವೈದ್ಯಕೀಯ ಸೇವೆಗಳ (ವಾಯು) ಮಹಾನಿರ್ದೇಶಕ ಏರ್ ಮಾರ್ಷಲ್ ಸಂದೀಪ್ ಥರೇಜಾ ಅವರು ಅಧ್ಯಕ್ಷೀಯ ಭಾಷಣ ಮಾಡಿ, ವಾಯುಪಡೆಯ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುವಲ್ಲಿ ಮತ್ತು ಬಾಹ್ಯಾಕಾಶ ಪ್ರಯಾಣಿಕ ಗಗನಯಾತ್ರಿಗಳ ಜೀವನ ಮತ್ತು ಕಾರ್ಯವನ್ನು ಬೆಂಬಲಿಸುವಲ್ಲಿ ಏರೋಸ್ಪೇಸ್ ಮೆಡಿಸಿನ್‌ನ ಮಹತ್ವವನ್ನು ಒತ್ತಿ ಹೇಳಿದರು. ಭಾರತೀಯ ವಾಯುಪಡೆಯ ಮೊದಲ ಮುಖ್ಯಸ್ಥರ ಗೌರವಾರ್ಥವಾಗಿ ಸ್ಥಾಪಿಸಲಾದ ಪ್ರತಿಷ್ಠಿತ ಏರ್ ಮಾರ್ಷಲ್ ಸುಬ್ರೋತೋ ಮುಖರ್ಜಿ ಸ್ಮಾರಕ ಉಪನ್ಯಾಸವನ್ನು ಉತ್ಸಾಹಿ ಇತಿಹಾಸಕಾರ ಶ್ರೀ ಅಂಚಿತ್ ಗುಪ್ತಾ ಅವರು ನೀಡಿದರು. ಹಿಂದಿನ ಹಲವು ವರ್ಷಗಳಲ್ಲಿ ಗಣ್ಯ ವ್ಯಕ್ತಿಗಳಾದ ಡಾ. ರಾಜಾ ರಾಮಣ್ಣ, ಡಾ. ಎಪಿಜೆ ಅಬ್ದುಲ್ ಕಲಾಂ, ಮಾಧವನ್ ನಾಯರ್, ಡಾ.ನರೇಶ್ ಟ್ರೆಹಾನ್, ವಿಂಗ್ ಕಮಾಂಡರ್ ರಾಕೇಶ್ ಶರ್ಮಾ (ನಿವೃತ್ತ) ಮತ್ತು ಶ್ರೀ ಸೈಯದ್ ಕಿರ್ಮಾನಿ ಮತ್ತಿತರರು ಈ ಪ್ರತಿಷ್ಠಿತ ಸ್ಮಾರಕ ಉಪನ್ಯಾಸವನ್ನು ನೀಡಿದ್ದಾರೆ. ವೈಮಾನಿಕ ವೈದ್ಯಕೀಯ ಕ್ಷೇತ್ರದಲ್ಲಿನ ಖ್ಯಾತ ಮತ್ತು ‘ವಾಯುಯಾನ ವೈದ್ಯಕೀಯದ ಪಿತಾಮಹ’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಏರ್ ವೈಸ್ ಮಾರ್ಷಲ್ ಎಂ.ಎಂ. ಶ್ರೀನಾಗೇಶ್ ಅವರನ್ನು ಗೌರವಾರ್ಥ ಸ್ಥಾಪಿಸಲಾದ ಏರ್ ವೈಸ್ ಮಾರ್ಷಲ್ ಎಂ.ಎಂ. ಶ್ರೀನಾಗೇಶ್ ಸ್ಮಾರಕ ಭಾಷಣವನ್ನು ಏರ್ ವೈಸ್ ಮಾರ್ಷಲ್ ದೀಪಕ್ ಗೌರ್ (ನಿವೃತ್ತ) ಅವರು ನೀಡಿದರು. ಹಿಂದೆ ‘ಜೆಮಿ ಹಾರ್ಮುಸ್ಜಿ ಫ್ರಾಮ್ಜಿ ಮಾಣೆಕ್ಷಾ ಪ್ಯಾನೆಲ್’ನಲ್ಲಿ ಪಿಕ್ಸೆಲ್ ಏರೋಸ್ಪೇಸ್ ಟೆಕ್ನಾಲಜೀಸ್ ಸಿಇಒ ಮತ್ತು ಸಂಸ್ಥಾಪಕ ಶ್ರೀ ಅವೈಸ್ ಅಹ್ಮದ್ ಮತ್ತು ಇಂಡಿಗೊ ಏರ್ ಲೈನ್ಸ್ ನ ಮುಖ್ಯ ವಿಮಾನ ಸುರಕ್ಷತಾ ಅಧಿಕಾರಿ ಕ್ಯಾಪ್ಟನ್ ಧ್ರುವ್ ರೆಬ್ಬಪ್ರಗಡ ಸೇರಿದಂತೆ ಅನೇಕ ತಜ್ಞರು ಅತಿಥಿ ಉಪನ್ಯಾಸಗಳನ್ನು ನೀಡಿದ್ದರು. ಸಮ್ಮೇಳನವು ವಿಮಾನ ಸಿಬ್ಬಂದಿ ತರಬೇತಿ ಮತ್ತು ಸಿಮ್ಯುಲೇಶನ್, ಕಾರ್ಯಾಚರಣಾ ಏರೋಸ್ಪೇಸ್ ಔಷಧ, ಬಾಹ್ಯಾಕಾಶ ಹಾರಾಟದ ಶರೀರಶಾಸ್ತ್ರ, ಎತ್ತರದ ಸವಾಲುಗಳು, ವೈದ್ಯಕೀಯ ನಾವೀನ್ಯತೆ, ಮಾನವೀಯ ಅಂಶಗಳು ಮತ್ತು ಕ್ಲಿನಿಕಲ್ ಏರೋಸ್ಪೇಸ್ ಔಷಧವನ್ನು ಒಳಗೊಂಡ ವೈವಿಧ್ಯಮಯ ವೈಜ್ಞಾನಿಕ ಗೋಷ್ಠಿಗಳನ್ನು ಒಳಗೊಂಡಿತ್ತು. ಆಕ್ಸಿಯಮ್ -4 ಕಾರ್ಯಾಚರಣೆಯ ಒಳನೋಟಗಳು, ಹೈಪೋಕ್ಸಿಯಾ ತರಬೇತಿಯಲ್ಲಿನ ಪ್ರಗತಿಗಳು, ಆನ್‌ಬೋರ್ಡ್ ಆಮ್ಲಜನಕ ಉತ್ಪಾದಕ ವ್ಯವಸ್ಥೆ (ಒಬಿಒಜಿಎಸ್-ಔಃಔಉS) ಮೌಲ್ಯಮಾಪನ, ಆಯಾಸ ಪತ್ತೆ, ಸೂಕ್ಷ್ಮ ಗುರುತ್ವಾಕರ್ಷಣೆಗೆ ಸಂಬಂಧಿಸಿದ ಸಂಶೋಧನೆ ಮತ್ತು ವಿಮಾನ ಅಪಘಾತ ತನಿಖೆ ಕೂಡ ಸಮ್ಮೇಳನದ ಮುಖ್ಯಾಂಶಗಳಲ್ಲಿ ಸೇರಿವೆ.

 

Share. Facebook Twitter Pinterest LinkedIn Tumblr Email WhatsApp
Previous Article*ಪಿಂಚಣಿ ವಂಚಿತರಿಗೂ ‘ಪಿಂಚಣಿ’ ಸೌಲಭ್ಯ : ಯೋಜನೆ ಸದುಪಯೋಗಕ್ಕೆ ಮಾಜಿ ಸೈನಿಕರ ಸಂಘ ಮನವಿ*
Next Article ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವ : ಸ್ವಾಮಿ ವಿವೇಕಾನಂದರ ಸಂದೇಶಗಳು ಯುವಕರಿಗೆ ಮತ್ತು ಮನುಕುಲಕ್ಕೆ ಪ್ರೇರಣಾಶಕ್ತಿಯಾಗಿದೆ : ಕ್ಯಾಪ್ಟನ್ ಬೃಜೇಶ್ ಚೌಟ*

Related Posts

*ಪ್ರತಿಭಾ ಕಾರಂಜಿ :ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ ಕಾವೇರಿ ಶಾಲೆ ವಿದ್ಯಾರ್ಥಿಗಳು*

February 12, 2026

ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?

February 11, 2026

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ಬಂಗಾರ ಕೊಳ್ಳುವವರಿಗೆ ಹಬ್ಬದ ಸಂಭ್ರಮ: ದಿಢೀರ್ ಇಳಿಕೆಯಾದ ಚಿನ್ನದ ದರ, ಎಷ್ಟಿದೆ ಗೊತ್ತಾ?

February 11, 2026

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಏರಿಕೆ ಕಂಡು ಆಭರಣ ಪ್ರಿಯರಲ್ಲಿ ಆತಂಕ ಮೂಡಿಸಿದ್ದ ಚಿನ್ನದ ದರದಲ್ಲಿ ಇಂದು ಕೊಂಚ…

*ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಹುಲಿ ಸೆರೆ*

February 11, 2026

ನಾಳೆ ದೇಶಾದ್ಯಂತ ಕಾರ್ಮಿಕ ಸಂಘಟನೆಗಳ ಮುಷ್ಕರ: ಬಸ್, ಬ್ಯಾಂಕ್, ಶಾಲಾ-ಕಾಲೇಜುಗಳ ಸ್ಥಿತಿ ಏನು? ಹೊರಗಡೆ ಹೋಗುವ ಮುನ್ನ ಈ ಸುದ್ದಿ ಓದಿ!

February 11, 2026

*ಪಿ.ಕೃಷ್ಣೇಗೌಡ ನೇತೃತ್ವದ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾಗಿ ಪಿ.ಕೆ.ಉದಯಕುಮಾರ್ ಆಯ್ಕೆ*

February 11, 2026

*ಆಹಾರ ಭದ್ರತಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೊಳಿಸಿ: ಡಾ.ಎಚ್.ಕೃಷ್ಣ*

February 11, 2026

*ಅರಣ್ಯ ಹಕ್ಕು ಕಾಯ್ದೆ ಆದಿವಾಸಿಗಳಿಗೆ ತಲುಪಿಸಿ: ಗಿರಿಧರ*

February 11, 2026

*ಕಾರ್ಮಿಕ ವರ್ಗದ ತುರ್ತು ರೋಗಿಗಳಿಗೆ ಸರತಿ ಸಾಲು ಬೇಡ : ಜಿಲ್ಲಾ ಸರ್ಜನ್ ಗೆ ಮನವಿ ಸಲ್ಲಿಸಿದ ಎಸ್‌ಡಿಟಿಯು*

February 11, 2026

*ಮೈಸೂರಿನಲ್ಲಿ ಪೂರ್ಣ ಪ್ರಮಾಣದ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಕ್ಕೆ ಯದುವೀರ್‌ ಒತ್ತಡ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಸಲ್ಲಿಸಿರುವ ಮೈಸೂರು-ಕೊಡಗು ಸಂಸದರು*

February 11, 2026

*ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ*

February 11, 2026

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*

February 11, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.