ವಿರಾಜಪೇಟೆ ನ.15 NEWS DESK : ಆರ್ಜಿ ಗ್ರಾಮದ ಪೆರುಂಬಾಡಿಯ ಸಂಶುಲ್ ಉಲಾಮಾ ಎಜುಕೇಶನಲ್ ಟ್ರಸ್ಟ್ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಕಡಂಗ ಗ್ರಾಮದವರಾದ ಮಾಜಿ ಸೈನಿಕರು ಹಾಗೂ ಉದ್ಯಮಿಗಳಾದ ಸಲಾಂ ಎಂ.ಕೆ ಅವರು ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ಈ ವಿದ್ಯಾ ಸಂಸ್ಥೆಯ ಸಮಾಜ ಪರ, ಜಾತಿ, ಮತ ಭೇದವಿಲ್ಲದ ಕಾರ್ಯಕ್ರಮದ ಬಗ್ಗೆ ಹಾಗೂ ಸಂಸ್ಥೆಯ ಯಶಸ್ಸಿನ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದರು. ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ನೀಡುವುದಕ್ಕೆ ಸಂತೋಷ ಹಾಗೂ ಅಭಿನಂದನೆ ಸಲ್ಲಿಸಿದರು. ಪ್ರತಿಯೊಂದು ವಿದ್ಯಾರ್ಥಿಗಳು ತಮಗೆ ಸಿಕ್ಕುವ ಅವಕಾಶಗಳನ್ನು ಸರಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು. ಅಲ್ಲದೆ ತಮಗೆ ವಿದ್ಯೆ ನೀಡಿದ ಸಂಸ್ಥೆ, ಅಧ್ಯಾಪಕರನ್ನು ಸ್ಮರಿಸಿ ತಯ್ನಾಡಿನ ಕೀರ್ತಿಯನ್ನು ಬೆಳಗಿಸುವಂತಾಗಬೇಕು. ವಿದ್ಯಾರ್ಥಿಗಳು ಬೆಳೆಯುವ ಹಂತದಲ್ಲೆ ಉತ್ತಮ ಜ್ಞಾನಾರ್ಜನೆಯನ್ನು ಬೆಳೆಸಿಕೊಂಡು, ದುಷ್ಚಟಗಳಿಗೆ ದಾಸರಾಗದೇ ಮೊಬೈಲ್ ಗೀಳನ್ನು ಬಿಟ್ಟು ಸಮಾಜಮುಖಿಯಾಗಿ ಬೆಳೆಯಬೇಕು ಎಂದು ಕಿವಿಮಾತನ್ನು ಹೇಳಿದರು. ಬಳಿಕ ತನ್ನ ಯಶಸ್ಸಿಗೆ ಮೂಲ ಕಾರಣಕರ್ತರಾದ ತಂದೆ ಅಬ್ದುಲ್ಲಾ ಹಾಗೂ ತಾಯಿ ರುಕೀಯ(ಹಜ್ಜುಮ್ಮ) ಅವರ ಆಶೀರ್ವಾದ ಎಲ್ಲಾ ವಿದ್ಯಾರ್ಥಿಗಳಿಗೂ ಇರಲಿ ಎನ್ನುವ ನಿಟ್ಟಿನಲ್ಲಿ ಅವರ ಸ್ಮರಣಾರ್ಥ ಪ್ರತಿ ತರಗತಿಯಲ್ಲಿ ಅತ್ಯಂತ ಅಧಿಕ ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರದಂತೆ ಶೈಕ್ಷಣಿಕ ಪೆÇ್ರೀತ್ಸಾಹಕ್ಕಾಗಿ ಧನ ಸಹಾಯವನ್ನು ನೀಡಿ, ಈ ಪ್ರೋತ್ಸಾಹಕರ ಸಹಾಯ ಕೇವಲ ವಿದ್ಯಾಭ್ಯಾಸದ ಪ್ರೋತ್ಸಾಹಕ್ಕೆ ಮಾತ್ರ. ಮುಂದಿನ ದಿನಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವಂತಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಆರ್ಜಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್, ಪಂಚಾಯಿತಿ ಸದಸ್ಯರಾದ ಉಪೇಂದ್ರ, ಪಂಚಾಯಿತಿ ಅಧ್ಯಕ್ಷೆ ಫಾತೀಮಾ, ಉದ್ಯಮಿ ನಾಸಿರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಶೈಲ, ಬಿಂದು, ನಿಲನ್, ಸೇರಿದಂತೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು, ಶಾಲಾ ಮುಖ್ಯೋಪಧ್ಯಾಯರು, ಶಿಕ್ಷಕರು, ಸಿಬ್ಬಂದಿ ವರ್ಗದವರು, ಪೋಷಕ, ಶಿಕ್ಷಕ ಸಂಘದ ಪದಾಧಿಕಾರಿಗಳು ಸೇರಿದಂತೆ ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.











