ವಿರಾಜಪೇಟೆ ನ.25 NEWS DESK : ಸುಳ್ಯ ತಾಲ್ಲೂಕಿನ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾ ಭವನ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ವಿರಾಜಪೇಟೆಯ ಪೆರುಂಬಾಡಿ ಗ್ರಾಮದ ಜೆನ್ ಶಿಟೋರಿಯೋ ಸ್ಕೂಲ್ ಆಫ್ ಇಂಡಿಯಾದ 15 ವಿದ್ಯಾರ್ಥಿಗಳು ಪಾಲ್ಗೊಂಡು ಚಿನ್ನ, ಬೆಳ್ಳಿ, ಕಂಚಿನವನ್ನು ಗೆದ್ದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ದೃತಿಕ್, ಪ್ರಜನ್, ಜೋಹಾನ್, ಕೃಶಾಂಕ್, ದಿಲನ್, ಗಾನವಿ, ಧನುಶ್ರೀ, ನಿರಂಜನ, ಆದಿ ದೇವು, ಪರಿಣಿತ್, ಡೇನಿಶ್, ಆದಮ್, ಸುಹಾನ್, ಬಿಂದ್ಯಾ, ಇವರುಗಳು ಕುಮಿತೆ ಮತ್ತು ಕಟ್ಟಾ ವಿಭಾಗದಲ್ಲಿ ತಮ್ಮ ಪ್ರದರ್ಶನ ನೀಡಿ ಬಾಲಕರ ವಿಭಾಗದ ಕುಮಿತೆಯಲ್ಲಿ 4 ಚಿನ್ನ 6 ಬೆಳ್ಳಿ, 1 ಕಂಚು, ಕಟ್ಟ ವಿಭಾಗದಲ್ಲಿ 3 ಚಿನ್ನ 6 ಬೆಳ್ಳಿ, 4 ಕಂಚು, ಬಾಲಕೀಯರ ವಿಭಾಗದ ಕುಮಿತೆಯಲ್ಲಿ 3 ಚಿನ್ನ, 1 ಬೆಳ್ಳಿ, ಕಟ್ಟ ವಿಭಾಗದಲ್ಲಿ 3 ಬೆಳ್ಳಿ, 1 ಕಂಚು, ಪದಕಗಳನ್ನು ಪಡೆದುಕೊಂಡು ತಮ್ಮ ಶಾಲೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರಿಗೆ ಸೆನ್ಸಾಯಿ ಪಿ.ಆರ್ ಶಿವಪ್ಪ ತರಬೇತಿ ನೀಡಿದ್ದಾರೆ.











