ನಾಪೋಕ್ಲು ನ.25 NEWS DESK : ಶೌರ್ಯ ವಿಪತ್ತು ನಿರ್ವಹಣಾ ಘಟಕ ವತಿಯಿಂದ ನಾಪೋಕ್ಲು ಸರ್ಕಾರಿ ಪದವಿ ಕಾಲೇಜಿನಲ್ಲಿ ಶ್ರಮದಾನ ಮಾಡಲಾಯಿತು. ಸದಾ ಸಾರ್ವಜನಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಒಟ್ಟು ಸೇರಿ ಕಾಲೇಜಿನ ಆವರಣದಲ್ಲಿ ಬೆಳೆದಿದ್ದ ಕಾಡುಗಿಡ ಗಂಟಿಗಳನ್ನು ಕಡಿದು, ಪ್ಲಾಸ್ಟಿಕ್ ತ್ಯಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಿದರು. ಈ ಸಂದರ್ಭ ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಬಾಳೆಯಡ ದಿವ್ಯ ಮಂದಪ್ಪ, ಹಾಗೂ ಸದಸ್ಯರಾದ ಉಮಾಲಕ್ಷ್ಮಿ, ಸುನಿತಾ, ರಮ್ಯಾ, ಚಂದ್ರಕಲಾ, ರಶ್ಮಿ ಶಂಕರ, ದಿಲೀಶ್, ಶರವಣ ನಾರಾಯಣ, ಮೈಲಪ್ಪ ಹಾಗೆ ಕಾಲೇಜು ಪ್ರಿನ್ಸಿಪಾಲ್ ಹೆಚ್.ಸಿ.ಪಲ್ಲವಿ ಉಪನ್ಯಾಸಕರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ.











