ಸುಂಟಿಕೊಪ್ಪ ನ.25 NEWS DESK : ಸರಕಾರಿ ಪದವಿಪೂರ್ವ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದ್ದು, ವಿಜೇತ ಮಕ್ಕಳಿಗೆ ಸಮಾಜ ಸೇವಕ ಇಬ್ರಾಹಿಂ (ಬಾಪ್ಪು) ಬಹುಮಾನಗಳನ್ನು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆ ಉಪಪ್ರಾಂಶುಪಾಲ ಬಾಲಕೃಷ್ಣ ಮಾತನಾಡಿ, ಸರಕಾರಿ ಶಾಲೆಗೆ ದಾನಿಗಳು ದೊರೆಯುವುದೇ ಅಪರೂಪ ಇಂತಹ ಸಂದರ್ಭದಲ್ಲಿ ಸ್ಥಳೀಯರಾದ ಇಬ್ರಾಹಿಂ ಬಾಪು ಅವರು ಸರಕಾರಿ ಶಾಲೆ ಮತ್ತು ಮಕ್ಕಳ ಮೇಲೆ ಅಭಿಮಾನವಿಟ್ಟು ಕ್ರೀಡಾಕೂಟದಲ್ಲಿ ಜಯಗಳಿಸಿದ ಮಕ್ಕಳಿಗೆ ಬಹುಮಾನಗಳನ್ನು ಪ್ರಯೋಜಿಸಿರುವುದು ಶ್ಲಾಘನೀಯ ಎಂದರು. ಶಾಲೆಯ ಅಭಿವೃದ್ಧಿಯ ದಿಸೆಯಲ್ಲಿ ಹಳೆಯ ವಿದ್ಯಾರ್ಥಿಗಳು ಶಾಲೆಯ ಕಟ್ಟಡಗಳನ್ನು ದುರಸ್ತಿಗೊಳಿಸುವ ಮೂಲಕ ರೂಪುಗೊಳಿಸಿರುವುದು ಮತ್ತು ಕೆನಾರಬ್ಯಾಂಕ್ ವತಿಯಿಂದ ಶಾಲೆಗೆ ಅಭಿವೃದ್ಧಿಗೆ 2 ಲಕ್ಷ ರೂ ದೇಣಿಗೆ ದೊರೆತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಸುಂಟಿಕೊಪ್ಪ ಹಿರಿಯ ಪತ್ರಕರ್ತರಾದ ಬಿ.ಡಿ.ರಾಜು ರೈ ಮಾತನಾಡಿ, ಸಮಾಜ ಸೇವೆಯಲ್ಲಿ ನಿರಂತವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಇಬ್ರಾಹಿಂ ಅವರ ಕೊಡುಗೆ ಒಂದು ಶಾಲೆಗೆ ಮಾತ್ರ ಸಿಮೀತವಾಗಿ ದೇಣಿಗೆ ನೀಡದೆ ಸರಕಾರಿ ಶಾಲೆಗಳನ್ನು ಗುರುತಿಸಿ ದೇಣಿಗೆ ನೀಡುತ್ತಿರುವುದು ಅಭಿನಂದಾರ್ಹ, ರೋಗಿಗಳು ಶಾಲೆ ತೊರೆದ ವಿದ್ಯಾರ್ಥಿಗಳ ಜೀವನ ರೂಪಿಸುವ ದಿಸೆಯಲ್ಲಿ ಅವರು ಶಿಕ್ಷಣಕ್ಕೆ ಆದ್ಯತೆ ನೀಡಬೇಕೆನ್ನು ಮಹದಾಸೆಯನ್ನು ಇರಿಸಿಕೊಂಡಿರುವ ಮಕ್ಕಳನ್ನು ಮರಳಿಗೆ ಸೇರಿಸುವ ಮೂಲಕ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡುತ್ತಿದ್ದಾರೆ ಎಂದು ರಾಜು ರೈ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಶಿಕ್ಷಕ ಪ್ರಕಾಶ್ ಮಾತನಾಡಿದರು. ಬಹುಮಾನ ಪ್ರಯೋಜಕರಾದ ಇಬ್ರಾಹಿಂ ಬಾಪ್ಪು ಅವರನ್ನು ಶಾಲಾ ಮುಖ್ಯೋಪಾದ್ಯಾಯರು ಸೇರಿದಂತೆ ಸಹಶಿಕ್ಷಕರು ಸನ್ಮಾನಿಸಿ ಗೌರವಿಸಿದರು. ಪ್ರಮುಖರಾದ ಮುಸ್ತಾಫ, ಶಾಲಾ ಸಹಶಿಕ್ಷಕರುಗಳಾದ ಚಿತ್ರ, ಲಿಯೋನ, ಜಯಶ್ರೀ, ಶಾಂತ ಹೆಗ್ಡೆ ಸೇರಿದಂತೆ ಮತ್ತಿತರರು ಇದ್ದರು.











