ಮಡಿಕೇರಿ ನ.26 NEWS DESK : ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಯ 57ನೇ ವಾರ್ಷಿಕ ಮಹಾರಥೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಮಾರ್ಗಶಿರ ಶುಕ್ಲಚಂಪಾ ಷಷ್ಠಿಯ ಅಂಗವಾಗಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಮುಂಜಾನೆಯಿಂದಲೇ ವಿಶೇಷ ಅಭಿಷೇಕ, ಹೋಮ ಹವನ, ಮಹಾಪೂಜೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆದು ನಂತರ ಶ್ರೀ ಸ್ವಾಮಿ ಸನ್ನಿಧಿಯಲ್ಲಿ ಧಿಗ್ಬಲಿ, ರಥ ಬಲಿ, ರಥ ಪೂಜೆ ಸೇರಿದಂತೆ ವಿವಿಧ ಪೂಜೆಗಳು ನೆರವೇರಿತು. ನಂತರ ಶ್ರೀ ಸ್ವಾಮಿಯ ವಿಗ್ರಹವನ್ನು ಹೂವಿನಿಂದ ಸಿಂಗಾರಗೊಂಡಿದ ಭವ್ಯ ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ನಂತರ ಭಕ್ತರ ಜೈಘೋಷದೊಂದಿಗೆ ಮಹಾ ರಥೋತ್ಸವಕ್ಕೆ ಚಾಲನೆ ದೊರೆಯಿತು. ರಥೋತ್ಸವಕ್ಕೂ ಮುನ್ನ ಅಯ್ಯಪ್ಪ ವ್ರತಾಧಾರಿಗಳು ದೇವರ ಕೀರ್ತನೆಗಳನ್ನು ಹಾಡಿ ಬೃಹತ್ ಪ್ರಮಾಣದ ಕರ್ಪೂರವನ್ನು ಹಚ್ಚಿ ಭಕ್ತಿ ಮೆರೆದರು. ರಥೋತ್ಸವವು ಸ್ವಾಮಿಯ ಸನ್ನಿದಿಯಿಂದ ಸಂಪ್ರದಾಯದಂತೆ ಕೂಡಿಗೆ ಮುಖ್ಯ ರಸ್ತೆಯ ಮೂಲಕ ಕೂಡುಮಂಗಳೂರು ಗ್ರಾಮದವರೆಗೆ ಸಾಗಿತು. ಈ ಸಂದರ್ಭ ಸಾವಿರಾರು ಭಕ್ತರು ರಥಕ್ಕೆ ಪೂಜೆ ಸಲ್ಲಿಸುವುದರ ಜೊತೆಗೆ ಬಾಳೆ ಹಣ್ಣು, ಜವನಗಳನ್ನು ರಥಕ್ಕೆ ಎಸೆದು ಭಕ್ತಿ ಮೆರೆದರು. ದೇವಾಲಯದ ಆವರಣದಿಂದ ಕೂಡಿಗೆ- ಕುಶಾಲನಗರ ಮುಖ್ಯ ರಸ್ತೆಯಾದ ಕೂಡುಮಂಗಳೂರು ಗ್ರಾಮದವರೆಗೆ ರಥವನ್ನು ಭಕ್ತರು ಎಳೆದುಕೊಂಡು ಹೋಗಿ ಕೂಡುಮಂಗಳೂರು ಗ್ರಾಮದವರೆಗೆ ಸಾಗಿದ ನಂತರ ಕೂಡುಮಂಗಳೂರು ಗ್ರಾಮಸ್ಥರಿಂದ ವರ್ಷಂಪ್ರತಿಯ ಸಂಪ್ರದಾಯದಂತೆ ಪೂಜಾ ಕಾರ್ಯಕ್ರಮಗಳು ನಡೆದವು. ರಥೋತ್ಸವದ ಮುಂಭಾಗದಲ್ಲಿ ಕೂಡಿಗೆ- ಕೂಡುಮಂಗಳೂರು ಹನುಮ ಸೇನಾ ಸೇವಾ ಟ್ರಸ್ಟ್ ನ ವತಿಯಿಂದ ವಿನೂತನವಾದ ಡ್ರೀವಡ್ಸ್ ಸಂಗೀತ ಒಳಗೊಂಡ ಚಂಡೆವಾದ್ಯೆ, ಕೀಲು ಕುದುರೆ, ಸೇರಿದಂತೆ ವಿವಿಧ ಆಕರ್ಷಕ ಬಗ್ಗೆ ನೃತ್ಯ ಗೊಂಬೆ ಗಳ ಕುಣಿತ, ರಥೋತ್ಸವ ದ ಹಬ್ಬಕ್ಕೆ ಹೆಚ್ಚು ಮೆರುಗು ನೀಡಿತು. ಸಂಜೆ ಕೂಡುಮಂಗಳೂರು ಗ್ರಾಮಸ್ಥರಿಂದ ಪೂಜೆ ಸಲ್ಲಿಕೆ ಅದ ನಂತರ ಸ್ವಸ್ಧಳಕ್ಕೆ ರಥವನ್ನು ಭಕ್ತರು ಎಳೆದುಕೊಂಡು ಬಂದರು. ಮಹಾ ರಥೋತ್ಸವದ ಅಂಗವಾಗಿ ದೇವಾಲಯ ಸಮಿತಿಯ ವತಿಯಿಂದ ಆಗಮಿಸಿದ್ದ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯವು ನಡೆಯಿತು. ಪೂಜಾ ಕೈಂಕರ್ಯಗಳನ್ನು ದೇವಸ್ಥಾನದ ಪ್ರಧಾನ ಅರ್ಚಕ ನವೀನ್ ಭಟ್ ಹಾಗೂ ಅರಕಲಗೂಡುವಿನ ಶ್ರೀ ಹರಿ ನೇತೃತ್ವದ ತಂಡದವರಿಂದ ನೆರವೇರಿತು. ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಾ ರಥೋತ್ಸವಕ್ಕೆ ಜಿಲ್ಲೆಯ ಭಕ್ತರು ಸೇರಿದಂತೆ ಪಕ್ಕದ ಹಾಸನ, ಮೈಸೂರು ಜಿಲ್ಲೆಗಳ ಗಡಿಭಾಗದ ತಾಲ್ಲೂಕಿನ ಪಿರಿಯಾಪಟ್ಟಣ, ಮತ್ತು ಅರಕಲಗೂಡು ತಾಲ್ಲೂಕಿನ ಸಾವಿರಾರು ಭಕ್ತರು ಆಗಮಿಸಿದರು. ರಥೋತ್ಸವದ ಅಂಗವಾಗಿ ದೇವಸ್ಥಾನದ ಜಾಗದಲ್ಲಿ ಜಾತ್ರೋತ್ಸವವು ನಡೆಯಿತು. ಇದರ ಅಂಗವಾಗಿ ಕೂಡಿಗೆಯಿಂದ ಕೂಡುಮಂಗಳೂರು ಗ್ರಾಮದ ವರೆಗೆ ಎಲ್ಲಾ ಅಂಗಡಿ ಮುಗಟ್ಟು, ಮನೆಗಳು, ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿದವು. ಮುಂಜಾನೆಯಿಂದಲೇ ಭಕ್ತರು ಹಣ್ಣು ಕಾಯಿ ಸೇರಿದಂತೆ ಹರಕೆಯನ್ನು ಸರ್ಮರ್ಪಿಸುತ್ತಿದರು, ಅಲ್ಲದೆ ಹರಕೆ ಹೊತ್ತ ಸಾರ್ವಜನಿಕ ಭಕ್ತರ ತಂದೆ ತಾಯಿಯವರು ಮಕ್ಕಳ ತಲೆಯ ಕೊದಲನ್ನು ತೆಗಿಸಿಕೊಂಡು ಹರಕೆ ಒಪ್ಪಿಸುವುದು ಕಂಡುಬಂದಿತು. ಈ ಸಂದರ್ಭ ಟಾಟಾ ಕಾಫಿ ಸಂಸ್ಕರಣಾ ಕೇಂದ್ರದ ಜನರಲ್ ಮ್ಯಾನೇಜರ್, ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಯು. ಸೋಮಯ್ಯ ಸೀನಿಯರ್ ಮ್ಯಾನೇಜರ್ ನವೀನ್, ಸತ್ಯನಾರಾಯಣ ವ್ರತಚಾರಣ ಸಮಿತಿ ಅಧ್ಯಕ್ಷ ಗುರು, ಕಾರ್ಯದರ್ಶಿ ವೀಜೂ , ಹನುಮ ಸೇನಾ ಸಮಿತಿ ಅಧ್ಯಕ್ಷ ಶಿವಕುಮಾರ್, ಕೂಡುಮಂಗಳೂರು ಗ್ರಾಮದ ಪ್ರಮುಖರಾದ ಕೆ.ಟಿ. ಅರುಣ್ ಕುಮಾರ್, ಸುರೇಶ್, ಕಿಶೋರ್ ಕುಮಾರ್, ಧರ್ಮ, ಕೃಷ್ಣ, ಮಹೇಂದ್ರ, ನಂದಕುಮಾರ್, ಹರೀಶ್, ಗಣೇಶ್, ಸುನೀಲ್, ರೀಜು ,ಶಿವಕುಮಾರ್, ಬಿ.ಸಿ. ಲೋಕೇಶ್, ಪವನ್ ಬಾಬಿ,ಕೆ.ಎನ್. ಧಣಿ, ಚಂದ್ರುಮೂಡ್ಲಿಗೌಡ , ಬೀಜೋ, ರಾಜಣ್ಣ , ರೀಜೂ ಸಂತೋಷ್ ಲೋಕೇಶ್, ಸೇರಿದಂತೆ ಗ್ರಾಮದ ಪ್ರಮುಖರು, ಕೂಡಿಗೆ- ಕೂಡುಮಂಗಳೂರು ವ್ಯಾಪ್ತಿಯ ಹನುಮ ಸೇನಾ ಸೇವಾ ಸಮಿತಿಯ ನಿರ್ದೇಶಕರು, ಸದಸ್ಯರು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿದರು. ಮದ್ದುಗುಂಡುಗಳ ಪ್ರದರ್ಶನದ ನಂತರ ವಿದ್ಯುತ್ ದೀಪಗಳಿಂದ ಅಲಂಕೃತವಾದ ಭವ್ಯ ಮಂಟಪೋತ್ಸವ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಯಿಂದ ಕೂಡುಮಂಗಳೂರು ಗ್ರಾಮ ವರೆಗೆ ಮೆರವಣಿಗೆ ಸಾಗಿ ನಂತರ ಸ್ವಸ್ಧಳಕ್ಕೆ ಬಂದಿತು.
ರಥೋತ್ಸವದ ಅಂಗವಾಗಿ ಶ್ರೀ ಹನುಮ ಸೇನಾ ಸೇವಾ ಸಮಿತಿಯ ವತಿಯಿಂದ ಕೂಡಿಗೆ ಸರ್ಕಲ್, ಡೈರಿ ಸರ್ಕಲ್, ಸೇರಿದಂತೆ ಕೂಡಿಗೆಯಿಂದ ಕೂಡುಮಂಗಳೂರು ಗ್ರಾಮ ವರೆಗೆ ಕೇಸರಿ ಬಣ್ಣದ ಬಟಿಗ್ಸ್ ಗಳ ಮೂಲಕ ಗ್ರಾಮವನ್ನು ಸಿಂಗಾರ ಮಾಡಲಾಗಿತು. ಕುಶಾಲನಗರ ಪೋಲಿಸ್ ಇಲಾಖೆಯ ಡಿ.ವೈ.ಎಸ್. ಪಿ. ಚಂದ್ರಶೇಖರ್ ರವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ರವರ ಸೂಚನೆಯಂತೆ ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣಾಧಿಕಾರಿ ರಾಮಚಂದ್ರ, ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್, ನೇತ್ರತ್ವದಲ್ಲಿ ಪೋಲಿಸ್ ಭದ್ರತೆ ಕಲ್ಪಿಸಲಾಗಿತು.











