ಮಡಿಕೇರಿ ನ.27 NEWS DESK : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ತಾಂತ್ರಿಕ ಉನ್ನತೀಕರಣ ಪರಿಷತ್, ವಿಷನ್ ಕರ್ನಾಟಕ ಪೌಂಡೇಶನ್, ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಡಿಕೇರಿ, ಹಾಗೂ ಪೊನ್ನಂಪೇಟೆ ಕೂರ್ಗ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇವರ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ Raising and Accelerating MSME Performance (RAMP) ರಡಿ Incubation ಯೋಜನೆ ಕುರಿತು ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಒಂದು ದಿನದ ಅರಿವು ಕಾರ್ಯಾಗಾರ ನಡೆಯಿತು. ಕಾರ್ಯಾಗಾರದ ಮಾನವ ಸಂಪನ್ಮೂಲ ವ್ಯಕ್ತಿಯಾಗಿ ಡಿಎಫ್‍ಒ ಎಂಎಸ್‍ಎಂಇ ನಿವೃತ್ತ ಉಪ ನಿರ್ದೇಶಕರಾದ ಗೋಪಿನಾಥ್ ರಾವ್ ಆರ್. ಅವರು ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿವರವಾದ ತಾಂತ್ರಿಕ ಉಪನ್ಯಾಸ ನೀಡಿದರು.











