ನಾಪೋಕ್ಲು ನ.27 NEWS DESK : ಹಳೆತಾಲ್ಲೂಕಿನ ಶಿವಚಾಳಿಯಂಡ ಕುಟುಂಬದ ನಾಗನ ಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು. ಮುಂಜಾನೆಯಿಂದಲೇ ದೇವರಿಗೆ ಹಾಲು, ಎಲೆನೀರು ಅಭಿಷೇಕ ಸೇರಿದಂತೆ ವಿವಿಧ ಪೂಜಾ ವಿಧಿಗಳನ್ನು ನೆರವೇರಿಸಲಾಯಿತು. ಅರ್ಚಕ ಜಗದೀಶ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿಕೊಟ್ಟರು. ಈ ಸಂದರ್ಭ ಹಿರಿಯರಾದ ವಚಾಳಿಯಂಡ ಸಹದೇವ, ಮಾದಪ್ಪ, ಅಂಬಿ ಕಾರ್ಯಪ್ಪ, ಕಿಶೋರ್ ಬೋಪಣ್ಣ, ಲವ, ಸುಭಾಷ್ ಇನ್ನಿತರ ಉಪಸ್ಥಿತರಿದ್ದು.
ವರದಿ : ದುಗ್ಗಳ ಸದಾನಂದ.











